ADVERTISEMENT

ಪಿಯು ಫಲಿತಾಂಶ: ದಾವಣಗೆರೆ ಜಿಲ್ಲೆಗೆ 19ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 9:14 IST
Last Updated 18 ಜೂನ್ 2022, 9:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ದಾವಣಗೆರೆ: ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆ 19ನೇ ಸ್ಥಾನದಲ್ಲಿಯೇ ಉಳಿದಿದೆ. 2020–21ರಲ್ಲಿ ಕೊರೊನಾ ಕಾರಣದಿಂದ ಪರೀಕ್ಷೆ ಬರೆದ ಎಲ್ಲರನ್ನೂ ತೇರ್ಗಡೆಗೊಳಿಸಲಾಗಿತ್ತು. 2019–20ರಲ್ಲಿ ಜಿಲ್ಲೆ 19ನೇ ಸ್ಥಾನ ಪಡೆದಿತ್ತು. 2018–19ರಲ್ಲಿ 22ನೇ ಸ್ಥಾನದಲ್ಲಿತ್ತು.

ಜಿಲ್ಲೆಯಲ್ಲಿ ಒಟ್ಟು 19,725 ಮಂದಿ ಪರೀಕ್ಷೆ ಬರೆದಿದ್ದರು. ಅದರಲ್ಲಿ 11,568 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದವರಲ್ಲಿ 17,722 ಮಂದಿ ಮೊದಲ ಬಾರಿ ಹಾಜರಾದವರು. 312 ಮಂದಿ ಖಾಸಗಿಯಾಗಿ ಪರೀಕ್ಷೆ ಬರೆದವರು. 1,691 ಮಂದಿ ಪುನರಾವರ್ತಿತರಾಗಿದ್ದಾರೆ. ಮೊದಲ ಬಾರಿ ಪರೀಕ್ಷೆ ಬರೆದವರಲ್ಲಿ ಶೇ 62.72ರಷ್ಟು ಮಂದಿ ಪಾಸಾಗಿದ್ದಾರೆ.

ಕಲಾ ವಿಭಾಗದಲ್ಲಿ 6302 ಮಂದಿ ಪರೀಕ್ಷೆ ಬರೆದಿದ್ದು 2473 ಮಂದಿ ಉತ್ತೀರ್ಣರಾಗಿ ಶೇ 39.24 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 4874 ವಿದ್ಯಾರ್ಥಿಗಳಲ್ಲಿ 2805 ಮಂದಿ ತೇರ್ಗಡೆ ಹೊಂದಿದ್ದಾರೆ. ಶೇ 57.55 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 8549 ವಿದ್ಯಾರ್ಥಿಗಳಲ್ಲಿ 6290 ಮಂದಿ ಪಾಸಾಗಿದ್ದಾರೆ. ಶೇ 73.58 ಫಲಿತಾಂಶ ಬಂದಿದೆ.

ADVERTISEMENT

ನಗರ ಪ್ರದೇಶದಲ್ಲಿ 15,247 ಮಕ್ಕಳು ಪರೀಕ್ಷೆ ಬರೆದಿದ್ದು 9012 (ಶೇ 59.11) ಮಂದಿ ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ 4478 ವಿದ್ಯಾರ್ಥಿಗಳಲ್ಲಿ 2556 (ಶೇ 57.09) ಪಾಸಾಗಿದ್ದಾರೆ ಎಂದು ಡಿಡಿಪಿಯು ‘ಪ್ರಜಾವಾಣಿ’ಗೆ ಶಿವರಾಜ್ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.