ADVERTISEMENT

ಆಯವ್ಯಯ ಪೂರ್ವಭಾವಿ ಸಭೆ: ಅಭಿವೃದ್ಧಿ ಕೆಲಸಕ್ಕೆ ಒತ್ತುನೀಡಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 4:09 IST
Last Updated 7 ಜನವರಿ 2026, 4:09 IST
ಮಲೇಬೆನ್ನೂರು ಪುರಸಭೆಯಲ್ಲಿ ಮಂಗಳವಾರ ನಡೆದ 2 ಹಂತದ ಆಯವ್ಯಯ ಪೂರ್ವಭಾವಿ ಸಭೆಯ ನೋಟ
ಮಲೇಬೆನ್ನೂರು ಪುರಸಭೆಯಲ್ಲಿ ಮಂಗಳವಾರ ನಡೆದ 2 ಹಂತದ ಆಯವ್ಯಯ ಪೂರ್ವಭಾವಿ ಸಭೆಯ ನೋಟ   

ಮಲೇಬೆನ್ನೂರು: 2025–26ನೇ ಸಾಲಿನ ಆಯವ್ಯಯದಲ್ಲಿ ಪುರಸಭೆ ವ್ಯಾಪ್ತಿಯ ಮೂಲ ಸೌಲಭ್ಯ ಹಾಗೂ ಅಭಿವೃದ್ಧಿ ಕೆಲಸಕ್ಕೆ ಹೆಚ್ಚಿನ ಹಣ ಮೀಸಲಿಡುವಂತೆ ಸಾರ್ವಜನಿಕರು ಆಗ್ರಹಿಸಿದರು.

ಪುರಸಭೆ ಪ್ರಭಾರ ಅಧ್ಯಕ್ಷೆ ಸುಮಯ್ಯಾಬಾನು ನೇತೃತ್ವದಲ್ಲಿ ಮಂಗಳವಾರ ನಡೆದ 2 ಹಂತದ ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ಆಗ್ರಹಿಸಿದರು.

ರಾಜ್ಯ ಹೆದ್ದಾರಿ–25ಕ್ಕೆ ವಿಭಜಕ ಅಳವಡಿಸಲು ಪುರಸಭೆಯಿಂದ ಅನುದಾನ ನೀಡಲು ಸದಸ್ಯ ಕೆ.ಜಿ. ಲೋಕೇಶ್‌ ಒತ್ತಾಯಿಸಿದರೆ, ಪುರಸಭೆಗೆ ಸ್ವಂತ ನಿವೇಶನ ಕೊಳ್ಳಲು ಹಣ ಮೀಸಲಿಡಲು ಸದಸ್ಯ ಗೌಡ್ರ ಮಂಜಣ್ಣ ಕೋರಿದರು.

ADVERTISEMENT

ನಿಟ್ಟೂರು ರಸ್ತೆ ಮೋರಿ ನಿರ್ಮಾಣ ಹಾಗೂ ಜಿಬಿಎಂಎಸ್‌ ಫಾರಂ ಕುರಿತಾಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬೋವಿ ಕುಮಾರ್‌, ವಿಶೇಷ ಚೇತನರಿಗೆ ಅನುದಾನ ಮೀಸಲಿಡುವ ಬಗ್ಗೆ ಸದಸ್ಯ ಸಾಬೀರ್‌ ಅಲಿ ಗಮನ ಸೆಳೆದರು.

ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ಪಟ್ಟಣದಲ್ಲಿ ಬೀದಿ ನಾಯಿ ಹಾಗೂ ಹಂದಿಕಾಟ ನಿಯಂತ್ರಣ, ಸಂತೆ ಮೈದಾನದ ಮೀನು ಮಾಂಸ ಮಾರುಕಟ್ಟೆ ಸ್ವಚ್ಛತೆಗೆ ವಿಶೇಷ ಅನುದಾನ, ಬೋವಿ ಶಿವು ಪಟ್ಟಣದ ಸಮಗ್ರ ಅಭಿವೃದ್ಧಿ ಸೇರಿ ವಿವಿಧ ಹವಾಲುಗಳನ್ನು ಸಭೆಯ ಮುಂದಿಟ್ಟರು.

ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಅನುಷ್ಠಾನಕ್ಕೆ ತರಲು ನಾಮ ನಿರ್ದೇಶಿತ ಸದಸ್ಯ ವೀರಯ್ಯ ಸ್ವಾಮಿ ಮನವಿ ಮಾಡಿದರು.

ಮುಖ್ಯಾಧಿಕಾರಿ ನಿರಂಜನಿ ಮಾತನಾಡಿ, ಉಪಸ್ಥಿತರ ಸಲಹೆಗಳನ್ನು ಅನುಷ್ಠಾನಗೊಳಿಸಲು ಆಯವ್ಯಯದಲ್ಲಿ ಸೇರಿಸುವ ಭರವಸೆ ನೀಡಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಶಬ್ಬೀರ್‌ ಖಾನ್‌, ಕಂದಾಯಾಧಿಕಾರಿ ಧನಂಜಯ ಕಟ್ಟೀಮನಿ, ಜೆಇ ರಾಘವೇಂದ್ರ, ಕಚೇರಿ ವ್ಯವಸ್ಥಾಪಕಿ ಜಯಲಕ್ಷ್ಮಿ, ಪರಿಸರ ಎಂಜಿನಿಯರ್‌ ಉಮೇಶ್‌ ಆರೋಗ್ಯ ನಿರೀಕ್ಷಕ ಶಿವರಾಜ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.