ನ್ಯಾಮತಿ: ತಾಲ್ಲೂಕಿನಾದ್ಯಂತ ವಾರದಿಂದ ಸುರಿಯುತ್ತಿದ್ದ ಮಳೆ ಪ್ರಮಾಣ ಶನಿವಾರದಿಂದ ತಗ್ಗಿದೆ. ಆದರೂ ಬೆಳೆ ಮತ್ತು ಮನೆಗಳ ಹಾನಿ ಪ್ರಮಾಣ ಹೆಚ್ಚಿದೆ.
ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ರೈತ ನಾಗರಾಜಪ್ಪ ಅವರ ಫಸಲಿಗೆ ಬಂದಿದ್ದ 25 ಅಡಿಕೆ ಮರಗಳು ಗಾಳಿಗೆ ನೆಲಕಚ್ಚಿವೆ. ಒಡೆಯರಹತ್ತೂರು ಗ್ರಾಮದ ರವಿಕುಮಾರ ಅವರ ಮನೆ ಗೋಡೆ, ನಟರಾಜ ಅವರ ಹೆಂಚಿನ ಮನೆ ಸಂಪೂರ್ಣ ಕುಸಿದಿದೆ. ಚಟ್ನಹಳ್ಳಿ ಗ್ರಾಮದ ಶೇಷಮ್ಮ, ಯರಗನಾಳ್ ಗ್ರಾಮದ ತೀರ್ಥಪ್ಪ, ದೊಡ್ಡೇರಿ ಗ್ರಾಮದ ಎ.ಕೆ.ಕಾಲೊನಿಯ ಮೈಲಮ್ಮ, ಗೋವಿನಕೋವಿ ಹೋಬಳಿಯ ದೊಡ್ಡೇರಿ ಗ್ರಾಮದ ಲಕ್ಷ್ಮಿದೇವಿ, ಸುರಹೊನ್ನೆಯ ಜಿ.ಲೋಕೇಶಪ್ಪ ಅವರ ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ಆಯಾ ಗ್ರಾಮ ವ್ಯಾಪ್ತಿಯ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.