ದಾವಣಗೆರೆ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ನಸುಕಿನಿಂದ ಗುಡುಗು ಸಹಿತ ಜೋರು ಮಳೆ ಸುರಿಯಿತು.
ನಸುಕಿನ 2.30ರ ವೇಳೆಗೆ ಗುಡುಗಿನ ಆರ್ಭಟದೊಂದಿಗೆ ಶುರುವಾದ ಮಳೆ ಕೆಲಕಾಲ ರಭಸವಾಗಿ ಸುರಿಯಿತು. ಆ ಬಳಿಕ ಬೆಳಿಗ್ಗೆವರೆಗೂ ಮುಂದುವರಿಯಿತು.
ನ್ಯಾಮತಿ, ಹೊನ್ನಾಳಿ, ಮಾಯಕೊಂಡ, ಸಂತೇಬೆನ್ನೂರು, ಕಡರನಾಯ್ಕನಹಳ್ಳಿ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಜಮೀನು, ತೋಟಗಳಲ್ಲಿ ನೀರು ನಿಂತಿದೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಅನುಕೂಲವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.