
ಮಹಿಳೆಯ ಗರ್ಭಕೋಶದಲ್ಲಿದ್ದ ಬೃಹತ್ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿರುವ ವೈದ್ಯರು
ಹರಿಹರ (ದಾವಣಗೆರೆ): ಮಹಿಳೆಯೊಬ್ಬರ ಗರ್ಭಕೋಶದಲ್ಲಿ ಬೆಳೆದಿದ್ದ ಬೃಹತ್ ಗಾತ್ರದ ಗಡ್ಡೆಯನ್ನು ಇಲ್ಲಿನ ಶುಭೋದಯ ನರ್ಸಿಂಗ್ ಹೋಂನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ.
ಹೊಟ್ಟೆನೋವಿನ ಕಾರಣಕ್ಕೆ ಆಸ್ಪತ್ರೆಗೆ ಬಂದಿದ್ದ 46 ವರ್ಷದ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿದಾಗ, ಗರ್ಭಕೋಶದಲ್ಲಿ ಗಡ್ಡೆ ಇರುವುದು ಕಂಡುಬಂದಿದೆ. ಶನಿವಾರ ಶಸ್ತ್ರಚಿಕಿತ್ಸೆ ನಡೆಸಲಾಯಿತು.
‘ಕಲ್ಲಂಗಡಿ ಆಕಾರದಲ್ಲಿದ್ದ ಗಡ್ಡೆಯು 45 ಇಂಚು ಸುತ್ತಳತೆ ಹೊಂದಿದ್ದು, 10.5 ಕೆ.ಜಿ. ತೂಕವಿದೆ. ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ನರ್ಸಿಂಗ್ ಹೋಂನ ಪ್ರಸೂತಿ ತಜ್ಞೆ ಸವಿತಾ ಜೆ. ತಿಳಿಸಿದರು.
‘ಈ ಗಡ್ಡೆಗೆ ಫೈಬ್ರಾಸ್ ಎನ್ನಲಾಗುತ್ತದೆ. ಇದು ಗೋಲಿ ಆಕಾರದಿಂದ ಕಲ್ಲಂಗಡಿ ಹಣ್ಣಿನ ಗಾತ್ರದವರೆಗೂ ಬೆಳೆಯುತ್ತದೆ. ಆದರೆ ಕ್ಯಾನ್ಸರ್ ಕಾರಕವಲ್ಲ’ ಎಂದು ಹೇಳಿದರು.
ವೈದ್ಯರಾದ ಹಾಲೇಶ್ ಬಿ., ಸುರೇಶ್ ಬಸರಕೋಡ್ ಹಾಗೂ ನವೀನ್ ಅವರೂ ಶಸ್ತ್ರಚಿಕಿತ್ಸೆ ನಡೆಸಿದ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.