ADVERTISEMENT

ಚನ್ನಗಿರಿ | ಸಂಕ್ರಾಂತಿ: ಖರೀದಿಗೆ ಭರಾಟೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 3:06 IST
Last Updated 15 ಜನವರಿ 2026, 3:06 IST
ಚನ್ನಗಿರಿ ಪಟ್ಟಣದ ಗಾಂಧಿ ವೃತ್ತದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಬುಧವಾರ ಕಬ್ಬಿನ ಕೋಲುಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವುದು.
ಚನ್ನಗಿರಿ ಪಟ್ಟಣದ ಗಾಂಧಿ ವೃತ್ತದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಬುಧವಾರ ಕಬ್ಬಿನ ಕೋಲುಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವುದು.   

ಚನ್ನಗಿರಿ: ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಆಚರಿಸಲು ತಾಲ್ಲೂಕಿನಾದ್ಯಂತ ಸಿದ್ಧತೆಗಳು ನಡೆದಿದ್ದು ಇದರಂಗವಾಗಿ ಅಗತ್ಯ ಬೇಕಾಗಿರುವಂತಹ ಕಬ್ಬು ಸೇರಿದಂತೆ ವವಿಧ ವಸ್ತುಗಳ ಖರೀದಿಗೆ ಬುಧವಾರ ಜೋರಾಗಿತ್ತು.

ಮಹಿಳೆಯರು ಗುರುವಾರ ಮನೆ ಮನೆಗಳಿಗೆ ಹೋಗಿ ಎಳ್ಳುಬೆಲ್ಲದೊಂದಿಗೆ ಕಬ್ಬಿನ ತುಂಡು, ಬಾಳೆಹಣ್ಣು, ಸಕ್ಕರೆ ಅಚ್ಚುಗಳನ್ನು ಇಟ್ಟು ಕೊಡುತ್ತಾರೆ. ಹಾಗಾಗಿ ಕಬ್ಬಿನ ತುಂಡುಗಳಿಗೆ ತುಸು ಬೇಡಿಕೆ ಹೆಚ್ಚಾಗಿತ್ತು.

ತಾಲ್ಲೂಕಿನಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯದೇ ಇರುವ ಕಾರಣದಿಂದ ಕಬ್ಬು ಬೆಳೆಯುವ ಪ್ರದೇಶಗಳಿಂದ ಕಬ್ಬನ್ನು ಖರೀದಿಸಿಕೊಂಡು ಬಂದಿದ್ದ ವ್ಯಾಪಾರಸ್ಥರು ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಾಶಿ ಹಾಕಿದ್ದರು. ₹ 100ಕ್ಕೆ ಒಂದು ಕಬ್ಬಿನ ಕೋಲು ಮಾರಾಟ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.