ADVERTISEMENT

ಸಂತೇಬೆನ್ನೂರು: ಬ್ಯಾಂಕ್‌ನಲ್ಲೇ ಮಹಿಳೆ ಬ್ಯಾಗ್‌ ಕತ್ತರಿಸಿ ₹ 1 ಲಕ್ಷ ಅಪಹರಣ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 19:21 IST
Last Updated 11 ಜುಲೈ 2025, 19:21 IST
ಸಂತೇಬೆನ್ನೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಶುಕ್ರವಾರ ಮಹಿಳೆಯೊಬ್ಬರ ಬ್ಯಾಗ್ ಕತ್ತರಿಸಿ ₹ 1 ಲಕ್ಷ ಕದ್ದ ಮಹಿಳೆ ಚಿತ್ರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
ಸಂತೇಬೆನ್ನೂರಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಶುಕ್ರವಾರ ಮಹಿಳೆಯೊಬ್ಬರ ಬ್ಯಾಗ್ ಕತ್ತರಿಸಿ ₹ 1 ಲಕ್ಷ ಕದ್ದ ಮಹಿಳೆ ಚಿತ್ರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ   

ಸಂತೇಬೆನ್ನೂರು: ಇಲ್ಲಿನ ಕೆನರಾ ಬ್ಯಾಂಕ್‌ ಶಾಖೆಯಲ್ಲಿ ಶುಕ್ರವಾರ ಹಣ ಪಾವತಿಸಲು ಕೌಂಟರ್ ಎದುರು ಸರದಿ ಸಾಲಿನಲ್ಲಿ ನಿಂತಿದ್ದ ಮಹಿಳೆಯೊನ್ನರ ಬ್ಯಾಗ್ ಕತ್ತರಿಸಿ ₹ 1 ಲಕ್ಷ ದೋಚಿದ್ದಾರೆ.

ಸಮೀಪದ ತಣಿಗೆರೆ ಗ್ರಾಮದ ಮಹಿಳೆ ಲತಾ ಎಂಬುವರು ಚಿನ್ನದ ಸಾಲ ಮರು ನವೀಕರಣ ಮಾಡಲು ₹ 3.5 ಲಕ್ಷ ಹಣವನ್ನು ಸಾರಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಬಂದಿದ್ದರು. ಇದನ್ನು ಗಮನಿಸಿದ ಕಳ್ಳಿಯರ ತಂಡ ಹಣದ ಚೀಲವನ್ನು ಬ್ಲೇಡ್‌ನಿಂದ ಕೊಯ್ದಿದ್ದಾರೆ.  ಅದರಲ್ಲಿದ್ದ ಎರಡು ಕಂತೆ (₹ 1 ಲಕ್ಷ) ಕದ್ದಿದ್ದಾರೆ. ಕದ್ದ ಹಣವನ್ನು ತೆಗೆದು ಒಬ್ಬ ಮಹಿಳೆ ಅಲ್ಲಿಂದ ಪರಾರಿ ಆಗಿದ್ದಾರೆ. ಹಣದ ಚೀಲದ ಭಾರ ಕಡಿಮೆಯಾದ ಅನುಭವವಾದ ತಕ್ಷಣ ಲತಾ ಬ್ಯಾಗ್  ನೋಡಿಕೊಂಡಿದ್ದಾರೆ. ಹಣ ಕದ್ದಿದ್ದಾರೆ ಎಂದಾಕ್ಷಣ  ಗ್ರಾಹಕರು ಇಬ್ಬರು ಮಹಿಳೆಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

ಇಬ್ಬರೂ ಮಧ್ಯ ಪ್ರದೇಶದ ಮೂಲದವರು. ಆರೋಪಿಗಳ ವಿಚಾರಣೆ ನಡೆಸಿದ ಪೊಲೀಸರು, ಹಣದೊಂದಿಗೆ ಪರಾರಿಯಾದ ಮಹಿಳೆಗಾಗಿ ಶೋಧ ನಡೆಸಿದ್ದಾರೆ.

ADVERTISEMENT

ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.