
ಪ್ರಜಾವಾಣಿ ವಾರ್ತೆ
ಸಂತೇಬೆನ್ನೂರು: ಇಲ್ಲಿನ ಬೀರೂರು- ಸಮ್ಮಸಗಿ ರಾಜ್ಯ ಹೆದ್ದಾರಿ ಪಕ್ಕದ ಹೊಲಗಳಲ್ಲಿ ಮೆಕ್ಕೆಜೋಳದ ತೆನೆಗಳ ರಾಶಿಗಳಿಗೆ ಸೋಮವಾರ ಆಕಸ್ಮಿಕವಾಗಿ ಬೆಂಕಿ ತಗುಲಿದೆ.
ತೋಟದ ಬೇಲಿ ಒಣ ತರಗೆಲೆಗೆ ಮಧ್ಯಾಹ್ನ ಹೊತ್ತಿದ್ದ ಬೆಂಕಿಯು ರಾಶಿಗೂ ಪಸರಿಸಿಕೊಂಡಿದೆ. 400 ರಿಂದ 500 ಕ್ವಿಂಟಲ್ ಮೆಕ್ಕೆಜೋಳ ಸುಟ್ಟಿದೆ. ಬೆಲೆ ಕುಸಿತದಿಂದ ತಡವಾಗಿ ಒಕ್ಕಣೆ ನಡೆಸಲು ರಾಶಿ ಹಾಕಲಾಗಿತ್ತು. ಚನ್ನಗಿರಿ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.
ಕಡೇಮನೆ ಕುಮಾರ್, ಕಡೇಮನೆ ನಾಗರಾಜ್ ಹಾಗೂ ರಾಜು ತೋಪಾಳ್ ಅವರಿಗೆ ಸೇರಿದ ಮೂರು ರಾಶಿಗಳು ಬೆಂಕಿಗೆ ಆಹುತಿ ಆಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.