ADVERTISEMENT

ಮುಸ್ಟೂರೇಶ್ವರ ದೇವಸ್ಥಾನದ ಶಿಲ್ಪ ಭಗ್ನಗೊಳಿಸಿದ ಕಿಡಿಗೇಡಿಗಳು

​ಪ್ರಜಾವಾಣಿ ವಾರ್ತೆ
Published 12 ಮೇ 2019, 6:37 IST
Last Updated 12 ಮೇ 2019, 6:37 IST
 ಜಗಳೂರು ತಾಲ್ಲೂಕಿನ ಮುಸ್ಟೂರು ಗ್ರಾಮದ ದೇವಸ್ಥಾನದಲ್ಲಿನ ಶಿಲ್ಪಗಳನ್ನು ಭಗ್ನಗೊಳಿಸಿರುವುದು
 ಜಗಳೂರು ತಾಲ್ಲೂಕಿನ ಮುಸ್ಟೂರು ಗ್ರಾಮದ ದೇವಸ್ಥಾನದಲ್ಲಿನ ಶಿಲ್ಪಗಳನ್ನು ಭಗ್ನಗೊಳಿಸಿರುವುದು   

ಜಗಳೂರು: ತಾಲ್ಲೂಕಿನ ಮುಸ್ಟೂರು ಗ್ರಾಮದ ಮುಸ್ಟೂರೇಶ್ವರ ದೇವಸ್ಥಾನದ ಹೊರ ಮಠದಲ್ಲಿರುವ ಶಿಲ್ಪಗಳನ್ನು ಕಿಡಿಗೇಡಿಗಳು ಶುಕ್ರವಾರ ರಾತ್ರಿ ಭಗ್ನಗೊಳಿಸಿದ್ದಾರೆ.

ಮುಸ್ಟೂರೇಶ್ವರ ಸ್ವಾಮಿ ಹಾಗೂ ಇತರ ದೇವರ ಶಿಲ್ಪಗಳ ಅಂಗಾಂಗಗಳನ್ನು ತುಂಡರಿಸಿ ವಿರೂಪಗೊಳಿಸಲಾಗಿದೆ. ಈ ಹಿಂದೆಯೂ ಹಲವು ಬಾರಿ ಕಿಡಿಗೇಡಿಗಳು ಇದೇ ರೀತಿ ಶಿಲ್ಪಗಳನ್ನು ವಿರೂಪಗೊಳಿಸಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ.

ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮದ ಮುಖಂಡರು ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.