ಸವಳಂಗ (ನ್ಯಾಮತಿ): ಸವಳಂಗ ವಲಯಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಬಾಲಕರ ಮತ್ತು ಬಾಲಕಿಯರ ವಿಭಾಗದ ಸಮಗ್ರ ಪ್ರಶಸ್ತಿ ಗಳಿಸಿದ್ದಾರೆ ಎಂದು ಮುಖ್ಯಶಿಕ್ಷಕಿ ಯಶೋದಾ ತಿಳಿಸಿದರು.
ಬಾಲಕಿಯರ ವಿಭಾಗದಲ್ಲಿ 4x100 ಮೀಟರ್ ರೀಲೆ ಪ್ರಥಮ, 600 ಮೀ. ಓಟ ತೃತೀಯ, ಡಿಸ್‌ಕಸ್ ಥ್ರೋ ದ್ವಿತೀಯ, ಶಾಟ್‌ಪಟ್ ಪ್ರಥಮ, 400 ಮೀ. ಓಟ ಪ್ರಥಮ, 200 ಮೀ. ಓಟ ತೃತೀಯ, ಹರ್ಡಲ್ಸ್ ತೃತೀಯ, ಕೊಕ್ಕೊ ಪ್ರಥಮ, ಕಬಡ್ಡಿ ದ್ವಿತೀಯ, ವಾಲಿಬಾಲ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ 100 ಮೀ. ಓಟ ತೃತೀಯ, 200 ಮೀ. ಓಟ ಪ್ರಥಮ, 400 ಮೀ. ಓಟ ತೃತೀಯ, 600 ಮೀ. ಓಟ ಪ್ರಥಮ, 4x100 ರಿಲೇ ಪ್ರಥಮ, ಡಿಸ್‌ಕಸ್ ಥ್ರೋ ದ್ವಿತೀಯ, ಕೊಕ್ಕೊ ಪ್ರಥಮ, ಕಬಡ್ಡಿ ಪ್ರಥಮ, ಥ್ರೋಬಾಲ್ ದ್ವಿತೀಯ, ವಾಲಿಬಾಲ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.