ಹೊನ್ನಾಳಿ: ತಾಲ್ಲೂಕಿನ ಕತ್ತಿಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಕ್ಟೋಬರ್ 14 ರಂದು ದಾವಣಗೆರೆ ಡಯಟ್‌ನಲ್ಲಿ ನಡೆದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ಧಾರೆ ಎಂದು ಶಾಲೆಯ ವಿಜ್ಞಾನ ಶಿಕ್ಷಕ ಎಸ್.ಎನ್. ಹನುಮಂತಪ್ಪ ತಿಳಿಸಿದ್ದಾರೆ.
ಶಾಲೆಯ ವಿದ್ಯಾರ್ಥಿ ಬಿ.ಸಿ. ರುಚಿತ್ ಕುಮಾರ್ ‘ಅಜ್ಞಾನವಲ್ಲ ತಂತ್ರಜ್ಞಾನ’ ಎಂಬ ನಾಟಕವನ್ನು ಬರೆದು ನಿರ್ದೇಶನ ಮಾಡಿದ್ದರು. ಈ ನಾಟಕದಲ್ಲಿ ವಿದ್ಯಾರ್ಥಿಗಳಾದ ಎಸ್. ಬಿಂದು, ಅಮೃತ, ಸಂಜನಾ, ಲಾವಣ್ಯ, ಭೂಮಿಕಾ, ನಿಸರ್ಗ, ಪವನಶ್ರೀ, ಎಚ್.ಎಂ. ಯೋಗೇಶ್, ಎಸ್.ಪಿ. ಉಮಾ ಪಾತ್ರಧಾರಿಗಳಾಗಿ ಭಾಗವಹಿಸಿದ್ದರು.
ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯಶಿಕ್ಷಕ ಬಿ.ಕೆ. ರವಿ, ಶಿಕ್ಷಕರಾದ ಭಾಗಣ್ಣನವರು, ಬಸವರಾಜ್, ವೆಂಕಟೇಶ್, ಮಹೇಶ್, ಮಲ್ಲಿಕಾರ್ಜುನ್, ಪ್ರೇಮಾಬಾಯಿ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.