ADVERTISEMENT

‘ಶರಣರ ಚಿಂತನೆಯ ಶರಣಬಸವೇಶ್ವರ ದಾಸೋಹ ಮಠ’

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2025, 15:57 IST
Last Updated 16 ಮಾರ್ಚ್ 2025, 15:57 IST
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ನನ್ನ ದೇವರು ಮತ್ತು ಇತರೆ ಕವಿತೆಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ‘ನನ್ನ ದೇವರು ಮತ್ತು ಇತರೆ ಕವಿತೆಗಳು’ ಪುಸ್ತಕ ಬಿಡುಗಡೆ ಮಾಡಲಾಯಿತು   

ಜಗಳೂರು: ‘ಬಯಲುಸೀಮೆ ಭಾಗದ ಸಮುದಾಯಗಳಲ್ಲಿ ಅಪಾರವಾದ ಪ್ರೀತಿ ಹಾಗೂ ಗೌರವಕ್ಕೆ ಪಾತ್ರವಾಗಿರುವ ಶರಣಬಸವೇಶ್ವರ ದಾಸೋಹ ಮಠ ಬಸವಾದಿ ಶರಣರ ಚಿಂತನೆಗಳನ್ನು ಅಳವಡಿಸಿಕೊಂಡಿರುವ ಜಾತ್ಯತೀತ ಮಠ’ ಎಂದು ಶರಣಬಸವೇಶ್ವರ ದಾಸೋಹ ಮಠ ಅಭಿವೃದ್ಧಿ ಸಮಿತಿ ಸಂಚಾಲಕ ದೊಣೆಹಳ್ಳಿ ಗುರುಮೂರ್ತಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದೊಣೆಹಳ್ಳಿಯ ಶರಣ ಬಸವೇಶ್ವರ ದಾಸೋಹಮಠದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ  ಭಾನುವಾರ ಮಹಿಳಾ ಸಬಲೀಕರಣ ಹಾಗೂ ಅಶೋಕ್ ಸಂಗೇನಹಳ್ಳಿ ಅವರ ‘ನನ್ನ ದೇವರು ಮತ್ತು ಇತರೆ ಕವಿತೆಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಮನುಷ್ಯನ ನಿತ್ಯ ಬದುಕಿನ ಅವಿಭಾಜ್ಯ ಪರಿಕರಗಳಾದ ಚಪ್ಪಲಿ, ಬಟ್ಟೆ, ಅನ್ನ, ಆಹಾರದಲ್ಲಿ ದೇವರನ್ನು ಅರಸುವ ಮೂಲಕ ವಿಭಿನ್ನವಾಗಿ ದೇವರ ಹುಡುಕಾಟ ನಡೆಸುವ ಅನನ್ಯ ಕಥಾವಸ್ತುವನ್ನು ‘ನನ್ನ ದೇವರು ಮತ್ತು ಇತರೆ ಕವಿತೆಗಳು’ ಕೃತಿ ಒಳಗೊಂಡಿದೆ ಎಂದು ವಿಶ್ಲೇಷಿಸಿದರು.

ADVERTISEMENT

‘12ನೇ ಶತಮಾನದಲ್ಲೇ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಪ್ರತಿಪಾದಿಸಿದ ಶರಣರ ಕಾರ್ಲ್ ಮಾರ್ಕ್ಸ್ ಚಿಂತನೆಗಳಲ್ಲೂ ಕಾಣಬಹುದಾಗಿದೆ’ ಎಂದು ಮಾಜಿ ಶಾಸಕ ಎಸ್.ಕೆ.ಬಸವರಾಜನ್‌ ಹೇಳಿದರು.

‘ಕವಿಯೊಬ್ಬನಿಗೆ ಭಾವನೆಗಳಿದ್ದ ಮಾತ್ರಕ್ಕೆ ಬರೆಯಲು ಸಾಧ್ಯವಾಗುವುದಿಲ್ಲ. ಸಂಕಟ ನೊವು ದುಃಖ ದುಮ್ಮಾನಗಳು ಸಶಕ್ತ ಕಾವ್ಯ ರೂಪುಗೊಳ್ಳಲು ಕಾರಣವಾಗುತ್ತವೆ’ ಎಂದು ಲೇಖಕ ಸಂಗೇನಹಳ್ಳಿ ಅಶೋಕ್‍ಕುಮಾರ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ಸರ್ಪಭೂಷಣ ಮಠದ ಪಟ್ಟಾಧ್ಯಕ್ಷ ಮಲ್ಲಿಕಾರ್ಜುನ ದೇವರು, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಕಾನಾಮಡುಗು ದಾಮ ಐಮಡಿ ಶರಣಾರ್ಯರು, ಹಿರಿಯ ಪತ್ರಕರ್ತ ಬಾ.ಮಾ. ಬಸವರಾಜಯ್ಯ, ಸರ್ವಮಂಗಳಮ್ಮ, ಎಚ್.ವಿ. ನಾಗೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ರೇವಣ್ಣ, ಮಹಾಬಲೇಶ್ವರ ಗೌಡ್ರು, ವಿಎಸ್‍ಎಸ್‍ಎನ್ ಅಧ್ಯಕ್ಷ ಕೆ. ಗುರುಮೂರ್ತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.