ಹೊನ್ನಾಳಿ: ಪಟ್ಟಣದ ಶಿವ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯ 6 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ಈ ಪೈಕಿ ನಾಲ್ಕು ಕ್ಷೇತ್ರಗಳ ಫಲಿತಾಂಶವನ್ನು ಘೋಷಣೆ ಮಾಡಲಾಗಿದೆ.
ಚೀಲೂರು ಮತ್ತು ಸಾಸ್ವೆಹಳ್ಳಿ ಕ್ಷೇತ್ರಗಳ ಫಲಿತಾಂಶ ಘೋಷಣೆಯನ್ನು ಹೈಕೋರ್ಟ್ ಆದೇಶದದಂತೆ ತಡೆಹಿಡಿಯಲಾಗಿದೆ ಎಂದು ಮತಗಟ್ಟೆ ಅಧಿಕಾರಿ ನವೀನ್‍ಕುಮಾರ್ ತಿಳಿಸಿದರು.
ಬೆನಕನಹಳ್ಳಿ–ಎಚ್.ಜಿ. ರುದ್ರೇಶ್, ಕುಂದೂರು–ಗೀತಾ ಜಿ. ಗುರುರಾಜ್, ಬೆಳಗುತ್ತಿ –ನಾಗರಾಜಪ್ಪ ಟಿ., ಸುರಹೊನ್ನೆ –ಎಸ್. ಸದಾಶಿವಪ್ಪ ಜಯಗಳಿಸಿದ್ದಾರೆ.
15 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅರಬಗಟ್ಟೆ–ಎ.ಜಿ. ಪ್ರಕಾಶ್, ಹೊನ್ನಾಳಿ–ಡಿ.ಪಿ. ರಂಗನಾಥ್, ಅರಕೆರೆ–ಬಿ.ಜಿ. ಶಿವಮೂರ್ತಿ, ಕೂಲಂಬಿ–ಎಂ.ಜಿ. ಲೋಕೇಶ್, ಗೋವಿನಕೋವಿ–ಮಂಜುಳಾ ವೀರಭದ್ರ ಪಾಟೀಲ್, ನ್ಯಾಮತಿ–ಗದ್ದಿಗೇಶಚಾರ್, ಎಸ್ಸಿ ಮೀಸಲು ಕ್ಷೇತ್ರ–ಗೋಪಾಲನಾಯ್ಕ, ಎಸ್‍ಟಿ ಮೀಸಲು ಕ್ಷೇತ್ರ–ಟಿ.ಎಂ. ಶಿವಾನಂದ್, ಸವಳಂಗ–ಟಿ. ಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಖಂಡರಾದ ಅರಬಗಟ್ಟೆ ರಮೇಶ್, ವಿಜಯಕುಮಾರ್, ಬೆನಕನಹಳ್ಳಿ ಗಣೇಶ್, ಕುಂದೂರು ಗುರುರಾಜ್, ತಾ.ಪಂ. ಮಾಜಿ ಅಧ್ಯಕ್ಷ ಸಿದ್ದಪ್ಪ, ಶಿವ ಬ್ಯಾಂಕಿನ ಕಾರ್ಯದರ್ಶಿ ರುದ್ರೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.