
ಹರಿಹರ: ಇಂದಿನ ಸಮಾಜದಲ್ಲಿ ಸುಳ್ಳು ಸಂಭ್ರಮಿಸುತ್ತಿದೆ ಮತ್ತು ವೈಚಾರಿಕತೆಯ ಮೇಲೆ ಹಲ್ಲೆಗಳು ನಡೆಯುತ್ತಿವೆ. ಇಂತಹ ಕಾಲಘಟ್ಟದಲ್ಲಿ ಊರು-ಕೇರಿಗಳ ಸಾಮಾಜಿಕ ಸಂಕಟಗಳಿಗೆ ಯುವಜನತೆ ಉತ್ತರದಾಯಿಯಾಗಬೇಕು ಎಂದು ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ. ಎ.ಬಿ. ರಾಮಚಂದ್ರಪ್ಪ ಆಶಯ ವ್ಯಕ್ತಪಡಿಸಿದರು.
ನಗರದ ಮೈತ್ರಿವನದಲ್ಲಿ ಮಾನವ ಬಂಧುತ್ವ ವೇದಿಕೆ ಹಾಗೂ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ರಾಜ್ಯಮಟ್ಟದ ಸಂಶೋಧನಾ ಕರ‍್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ನಮ್ಮ ಪ್ರಭುತ್ವವು ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಹಾಗಾಗಿ ಸಮಾಜ ಬದಲಾಗಬೇಕು. ನೊಂದ ಜನಕ್ಕೆ ನ್ಯಾಯ ಸಿಗಬೇಕು. ಅಸಮಾನತೆ ತೊಲಗಬೇಕು. ಸಮಾನತೆ ಜಾರಿಯಾಗಬೇಕು. ಇಂದು ಆಹಾರ, ಓದು ಮತ್ತು ರ‍್ಮದ ಹೆಸರಿನಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚಾಗುತ್ತಿದೆ. ಯುವ ಸಮುದಾಯವು ಸ್ಥಾಪಿತ ಸಮಾಜದ ಧೋರಣೆಗಳನ್ನು ಅರಿತು, ವೈಚಾರಿಕತೆಯ ಮೂಲಕ ಅಸಮಾನತೆ ತೊಲಗಿಸಲು ಸಂಘಟಿತರಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಸಾಮಾಜಿಕ ಬದಲಾವಣೆಯ ಆಶಯದೊಂದಿಗೆ ರಾಜ್ಯದಲ್ಲಿ ಮಾನವ ಬಂಧುತ್ವ ವೇದಿಕೆಯು ಯಾವುದೇ ಪ್ರಚಾರವಿಲ್ಲದೆ ಜನಪರ ಕೆಲಸ ಮಾಡುತ್ತಿದೆ. ಸಚಿವ ಸತೀಶ ಜಾರಕಿಹೊಳಿ ಅವರ ರ‍್ಥಿಕ ಸಹಕಾರದಿಂದ ರಾಜ್ಯಾದ್ಯಂತ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದರು.
ಮಾರುಕಟ್ಟೆ ಸ್ವರೂಪದ ಇಂದಿನ ಜಗತ್ತಿನಲ್ಲಿ ಇಂತಹ ವಿದ್ಯರ‍್ಥಿಪರ ಕರ‍್ಯಕ್ರಮಗಳು ಅಗತ್ಯ ಎಂದರು. ಡಾ. ಮದಕರಿ ನಾಯಕ ಎಚ್.ಆರ್. ಮತ್ತು ಡಾ. ರೂಪೇಶ್ ಕುಮಾರ ಅವರು ಸಂಶೋಧನಾ ಶಿಬಿರದ ಮೌಲ್ಯವನ್ನು ಶ್ಲಾಘಿಸಿ, ಇಂತಹ ಶಿಬಿರಗಳು ನಿರಂತರವಾಗಿ ನಡೆಯಲಿ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ನಾಗರಾಜ ಎಸ್. ಆಶಿಸಿದರು.
ರಾಜ್ಯದ ವಿವಿಧೆಡೆಯಿಂದ 130ಕ್ಕೂ ಹೆಚ್ಚು ಸಂಶೋಧನರ‍್ಥಿಗಳು ಆಗಮಿಸಿದ್ದರು. ಎರಡು ದಿನಗಳಲ್ಲಿ ಒಟ್ಟು 6 ವಿಷಯಗಳ ಮೇಲೆ ಗೋಷ್ಠಿಗಳು ಹಾಗೂ ತಲಾ 20 ಸಂಶೋಧನರ‍್ಥಿಗಳ 6 ತಂಡಗಳ ನಡುವೆ ಗುಂಪು ರ‍್ಚೆಗಳು ನಡೆದವು.
ಕರ‍್ಯಕ್ರಮದಲ್ಲಿ ಪ್ರೊ.ಜಿ. ಪ್ರಶಾಂತ ನಾಯಕ, ಪ್ರೊ.ವೆಂಕಟಗಿರಿ ದಳವಾಯಿ, ಪ್ರೊ.ಫಕೀರೇಶ ಹಳ್ಳಳ್ಳಿ ಹಾಗೂ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಭೀಮಪ್ಪ ಉಪಸ್ಥಿತರಿದ್ದರು. ಕಲಾವಿದ ಎಸ್. ಹನುಮಂತಪ್ಪ ಕರೂರು ಅವರಿಂದ ಭೀಮಗೀತೆ ಗಾಯನ ನಡೆಯಿತು. ಸಚಿನ್ ಜಿ.ಎಚ್. ನಿರೂಪಿಸಿದರೆ, ಡಾ. ವಿಜಯಕುಮಾರ ಎಚ್.ಜಿ. ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.