ADVERTISEMENT

ಮಲೇಬೆನ್ನೂರು | ಸೋಲಾರ್‌ ಪಂಪ್‌ಸೆಟ್‌ ಯೋಜನೆ ಲಾಭ ಪಡೆಯಿರಿ: ಶಾಸಕ ಬಿ.ಪಿ. ಹರೀಶ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:48 IST
Last Updated 11 ಜನವರಿ 2026, 6:48 IST
ರೈತ ಜಯಪ್ಪ ಕುಸುಮ್‌ ಯೋಜನೆಯಡಿ ಅಳವಡಿಸಿಕೊಂಡಿರುವ ಸೋಲಾರ್‌ ಪಂಪ್ ಸೆಟ್‌ನ್ನು ಶನಿವಾರ ಶಾಸಕ ಬಿ.ಪಿ. ಹರೀಶ್‌ ಪಿಎಂ ಉದ್ಘಾಟಿಸಿದರು
ರೈತ ಜಯಪ್ಪ ಕುಸುಮ್‌ ಯೋಜನೆಯಡಿ ಅಳವಡಿಸಿಕೊಂಡಿರುವ ಸೋಲಾರ್‌ ಪಂಪ್ ಸೆಟ್‌ನ್ನು ಶನಿವಾರ ಶಾಸಕ ಬಿ.ಪಿ. ಹರೀಶ್‌ ಪಿಎಂ ಉದ್ಘಾಟಿಸಿದರು   

ಮಲೇಬೆನ್ನೂರು: ಕುಸುಮ್‌ ಯೋಜನೆಯಡಿ ರೈತರ ಜಮೀನುಗಳ ಕೊಳವೆಬಾವಿಯಿಂದ ನೀರೆತ್ತಲು ಸೋಲಾರ್‌ ಪಂಪ್‌ಸೆಟ್‌ ಅಳವಡಿಸುವ ಯೋಜನೆಯ ಲಾಭ ಪಡೆಯುವಂತೆ ಶನಿವಾರ ಶಾಸಕ ಬಿ.ಪಿ. ಹರೀಶ್‌ ಮನವಿ ಮಾಡಿದರು.

ಸಮೀಪದ ಜಿಗಳಿ ಗ್ರಾಮದ ರೈತ ಜಯಪ್ಪ ನಿರ್ಮಿಸಿದ ಸೋಲಾರ್‌ ಪಂಪ್ ಸೆಟ್‌ ಉದ್ಘಾಟಿಸಿ ಮಾತನಾಡಿದರು.

ರೈತರ ಕಲ್ಯಾಣಕ್ಕೆ ಕೇಂದ್ರ ರಾಜ್ಯ ಸರ್ಕಾರ ಹಲವಾರು ಸರಳ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಗೊಳಿಸುತ್ತಿವೆ. ವಿದ್ಯುತ್‌ ಸಮಸ್ಯೆ ನೀಗಲಿವೆ. ಯೋಜನೆಯಲ್ಲಿ ಮಧ್ಯವರ್ತಿ ಕಾಟವಿಲ್ಲ, ಸಹಾಯಧನದ ಲಾಭವಿದೆ. ಕಂಬ, ತಂತಿ ಮಾರ್ಗ, ಪರಿವರ್ತಕ ಹಾಕುವ ವೆಚ್ಚ ಇಲ್ಲ ಎಂದರು.

ADVERTISEMENT

ಬೆಸ್ಕಾಂ ಶಾಖಾಧಿಕಾರಿ ಮೇಘರಾಜ್‌ ಕುಸುಮ್‌, ಸೂರ್ಯಘರ್ ಯೋಜನೆ ಕುರಿತು ರೈತರಿಗೆ ಅಂಕಿ–ಅಂಶಗಳ ಸಹಿತಿ‌ ಮಾಹಿತಿ ನೀಡಿದರು.

ಬಿಜೆಪಿ ಮುಖಂಡ ಹನಗವಾಡಿ ವೀರೇಶ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಗಟ್ಟೆ ಲಿಂಗರಾಜ್‌, ಆನಂದಪ್ಪ, ಬಸವನಗೌಡ್ರು, ಬಸವರಾಜಪ್ಪ, ನಾಗರಾಜ್‌, ಚಂದ್ರಪ್ಪ, ಮಂಜಪ್ಪ,ಸಂತೋಷ್‌, ರೈತರು ಇದ್ದರು. ಇಂದೂಧರ್‌ ಎನ್.‌ ರುದ್ರಗೌಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.