ಹೊನ್ನಾಳಿ: ಪಟ್ಟಣದ ಅಗ್ರಹಾರದಲ್ಲಿರುವ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ವಿವರ: ತಾಲ್ಲೂಕು ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಧೀರಜ್ ಯೋಗಾಸನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲೆ ಬಾಲಕರ ವಿಭಾಗದಲ್ಲಿ ಎಚ್.ಜಿ.ನವೀನ್, ಎ.ದಿಂಗತ್, ಕೆ.ಜಿ.ರೋಹಿತ್, ಅಕುಲ್ 400 ಮೀ. ರಿಲೇ ಓಟದಲ್ಲಿ ಪ್ರಥಮ ಸ್ಥಾನ, 600 ಮೀ. ಓಟದಲ್ಲಿ ಕೆ.ಜಿ. ರೋಹಿತ್ ತೃತೀಯ ಸ್ಥಾನ, ಬಾಲಕರ ಕೊಕ್ಕೊ ಪ್ರಥಮ ಸ್ಥಾನ, ಹರ್ಡಲ್ಸ್‌ನಲ್ಲಿ ಅಕುಲ್ ಎಂ.ಸಿ ಪ್ರಥಮಸ್ಥಾನ ಪಡೆದುಕೊಂಡಿದ್ದಾರೆ. ಡಿಸ್ಕಸ್ ಥ್ರೋನಲ್ಲಿ ನವೀನ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ತಂಡ ಪ್ರಶಸ್ತಿ: ಯೋಗಾಸನದಲ್ಲಿ ಯಶಸ್ ಪ್ರಥಮ ಸ್ಥಾನ, ಸಂಕೇತ್ ಭಾರಧ್ವಾಜ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 600 ಮೀ ಓಟದಲ್ಲಿ ಎಚ್.ಎಂ.ಸ್ನೇಹಾ ಪ್ರಥಮ ಸ್ಥಾನ, ಸಂಜನಾ ದ್ವಿತೀಯ ಸ್ಥಾನ, 400 ಮೀ. ಓಟದಲ್ಲಿ ಎಚ್.ಎಂ. ಸ್ನೇಹಾ ಪ್ರಥಮ ಸ್ಥಾನ, ಹೊನ್ನಮ್ಮ ದ್ವಿತೀಯ ಸ್ಥಾನ, 100 ಹಾಗೂ 200 ಮೀಟರ್ ಓಟದಲ್ಲಿ ವಿಶಾಖಾ ತೃತೀಯ ಸ್ಥಾನ, 400 ಮೀ. ರಿಲೇನಲ್ಲಿ ದೀಪಿಕಾ, ವಿಶಾಖಾ, ಸಂಜನಾ, ಸ್ನೇಹಾ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲಕಿಯರ ಕೊಕ್ಕೊ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಹರ್ಡಲ್ಸ್‌ನಲ್ಲಿ ಎಂ.ಎಸ್. ಸಂಜನಾ ಪ್ರಥಮ ಸ್ಥಾನ, ಶಾಟ್‌ಪಟ್‌ನಲ್ಲಿ ಸ್ನೇಹಾ ಪ್ರಥಮ ಸ್ಥಾನ, ಉದ್ದ ಜಿಗಿತದಲ್ಲಿ ಎಸ್.ಎಸ್. ದೀಪಿಕಾ ದ್ವಿತೀಯ ಸ್ಥಾನ, ಬಾಲಕಿಯರ ತಂಡ ಪ್ರಶಸ್ತಿ ಕೂಡಾ ನಮ್ಮ ಶಾಲೆಗೆ ಸಿಕ್ಕಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎನ್. ರಾಯ್ಕರ್ ತಿಳಿಸಿದರು.
ಎಚ್.ಎಂ. ಸ್ನೇಹಾ ಅವರಿಗೆ ‘ವೀರಾಗ್ರಹಿಣಿ’ ಪ್ರಶಸ್ತಿ ಲಭಿಸಿದೆ. ಬಾಲಕ ಹಾಗೂ ಬಾಲಕಿಯರಿಗೆ ಸಮಗ್ರ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.
ಸೋಮವಾರ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಸಂಸ್ಥೆಯ ಅಧ್ಯಕ್ಷ ಎಂ.ಎನ್. ರಾಯ್ಕರ್, ಕಾರ್ಯದರ್ಶಿ ಜೆ.ಕೆ.ಬಾಬು, ಖಜಾಂಚಿ ಕಿರಣ್ ರಾಯ್ಕರ್, ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ಹೆಗ್ಡೆ, ಟೀಂ ಮ್ಯಾನೇಜರ್ ಅತೀಕ್ ಅಹ್ಮದ್, ಆಡಳಿತಾಧಿಕಾರಿ ಸಮನ, ಮುಖ್ಯಶಿಕ್ಷಕ ಗಿರೀಶ್ ಪಾಟೀಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.