ADVERTISEMENT

ಯಡಿಯೂರಪ್ಪ ಅವಧಿಯಲ್ಲೇ ಎಸ್‌ಟಿ ಮೀಸಲಾತಿ ಶೇ 7.5ಕ್ಕೆ ಹೆಚ್ಚಳ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 7:12 IST
Last Updated 9 ಫೆಬ್ರುವರಿ 2021, 7:12 IST
   

ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲೇ ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ 3ರಿಂದ ಶೇ 7.5ಕ್ಕೆ ಹೆಚ್ಚಿಸಲಾಗುವುದು. ಬೇರೆ ಸಮುದಾಯದವರೂ ಎಸ್‌ಟಿಗೆ ಸೇರಿಸುವಂತೆ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಸಮುದಾಯದವರು ಸ್ವಲ್ಪ ತಾಳ್ಮೆಯಿಂದ ಕಾಯಬೇಕು ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.

ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಪಿ ಮಂಗಳವಾರ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಅವರು ಮಾತನಾಡಿದರು. ನನಗೆ ರಾಜಕೀಯ ಮುಖ್ಯವಲ್ಲ. ಸಮುದಾಯ, ಮೀಸಲಾತಿಯೇ ಮುಖ್ಯ. ಜನಸಂಖ್ಯೆ ಆಧಾರದಲ್ಲಿ ನಮ್ಮ ಸರ್ಕಾರವೇ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಿದೆ. ಬೇರೆಯವರು ಮಾಡುವ ಹೋರಾಟದ ಬಗ್ಗೆ ಸಮುದಾಯದವರು ಗಮನ ನೀಡಬೇಕಾಗಿಲ್ಲ ಎಂದು ಹೇಳಿದರು.

ನಾವು ಒಗ್ಗಟ್ಟಿಲ್ಲದ ನಾಯಕರಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ ಶ್ರೀರಾಮುಲು, ಭಿನ್ನಮತವನ್ನು ಬಿಟ್ಟು ರಾಜಕೀಯವಾಗಿ ಒಗ್ಗಟ್ಟಾಗಬೇಕು. ಆರ್ಥಿಕ, ರಾಜಕೀಯವಾಗಿ ಮುಂದಕ್ಕೆ ಬರಬೇಕು. ಶಿಕ್ಷಣದ ಮೂಲಕ ಇದನ್ನು ಸಾಧಿಸಬೇಕು ಎಂದು ಕರೆ ನೀಡಿದರು.

ADVERTISEMENT

ಈ ಮಧ್ಯೆ, ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.