ADVERTISEMENT

ಸ್ಟ್ಯಾನ್ ಸ್ವಾಮಿಗೆ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 16:04 IST
Last Updated 7 ಜುಲೈ 2021, 16:04 IST
ಜೈಲಿನಲ್ಲಿ ಸಾವನ್ನಪ್ಪಿದ ಆದಿವಾಸಿ ಪರ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಅವರಿಗೆ ಪ್ರಗತಿಪರರು ದಾವಣಗೆರೆ ಜಯದೇವ ವೃತ್ತದಲ್ಲಿ ಬುಧವಾರ ಸೇರಿ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಿದರು
ಜೈಲಿನಲ್ಲಿ ಸಾವನ್ನಪ್ಪಿದ ಆದಿವಾಸಿ ಪರ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಅವರಿಗೆ ಪ್ರಗತಿಪರರು ದಾವಣಗೆರೆ ಜಯದೇವ ವೃತ್ತದಲ್ಲಿ ಬುಧವಾರ ಸೇರಿ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಿದರು   

ದಾವಣಗೆರೆ: ಜೈಲಿನಲ್ಲಿ ಸಾವನ್ನಪ್ಪಿದ ಆದಿವಾಸಿ ಪರ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಅವರಿಗೆ ಪ್ರಗತಿಪರರು ಜಯದೇವ ವೃತ್ತದಲ್ಲಿ ಬುಧವಾರ ಸೇರಿ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಅರ್ಪಿಸಿದರು.

ಸ್ಟ್ಯಾನ್ ಸ್ವಾಮಿ ಅವರು ಬುಡಕಟ್ಟು ಜನಾಂಗಕ್ಕಾಗಿ, ಆದಿವಾಸಿಗಳಿಗಾಗಿ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದರು. ದೇಶದಲ್ಲಿ ದಲಿತರ ಮತ್ತು ಮುಸಲ್ಮಾನರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸುತ್ತಿದ್ದರು. ಸರ್ಕಾರಗಳ ಜನವಿರೋಧಿ ನೀತಿಯನ್ನು ವಿರೋಧಿಸುತ್ತಿದ್ದರು ಎಂದು ಸ್ಮರಿಸಲಾಯಿತು.

ಅವರನ್ನು ಮಟ್ಟ ಹಾಕಬೇಕು ಎಂದು ಸರ್ಕಾರ ನಿರ್ಧರಿಸಿತ್ತು. 2018ರಲ್ಲಿ ಭೀಮಾ ಕೋರೆಂಗಾವ್‌ ವಿಜಯೋತ್ಸವ ಸಂದರ್ಭದಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಡೆಸಿದ ಅಹಿತಕರ ಘಟನೆಯನ್ನೇ ನೆಪವಾಗಿಟ್ಟುಕೊಂಡು 84 ವರ್ಷದ, ಪಾರ್ಕಿನ್‌ಸನ್‌ ಕಾಯಿಲೆಯಿಂದ ಬಳಲುತ್ತಿದ್ದ ಸ್ಟ್ಯಾನ್‌ ಅವರನ್ನು ಬಂಧಿಸಿ ದೇಶದ್ರೋಹದಂತಹ ಸುಳ್ಳು ಪ್ರಕರಣಗಳನ್ನು ದಾಖಲಿಸಿತ್ತು. ಇದೀಗ ಅವರು ಜೈಲಿನಲ್ಲಿಯೇ ಮೃತಪಟ್ಟಿದ್ದಾರೆ. ಅದಕ್ಕೆ ಸರ್ಕಾರದ ಸರ್ವಾಧಿಕಾರಿ ಧೋರಣೆಯೇ ಕಾರಣ ಎಂದು ಪ್ರಗತಿಪರರು ಆರೋಪಿಸಿದರು.

ADVERTISEMENT

ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ಈ ರೀತಿ ನಡೆಸಿಕೊಂಡು ಸಾವಿಗೆ ಕಾರಣವಾಗಿರುವುದು ದೇಶಕ್ಕೆ ಕಪ್ಪು ಚುಕ್ಕಿ ತಂದಿದೆ. ಪ್ರಜಾಪ್ರಭುತ್ವಕ್ಕೆ ಇದು ಮಾರಕ ಎಂದು ಟೀಕಿಸಿದರು.


ಹಿರಿಯ ವಕೀಲ ಅನೀಸ್‌ ಪಾಷ, ಆಡಿಟರ್ ಮೊಹಮ್ಮದ್ ಬಾಷಾ ಸಾಬ್, ವಕೀಲ ರುದ್ರೇಶ್, ಆಮ್ ಆದ್ಮಿ ಪಕ್ಷದ ಆದಿಲ್ ಖಾನ್, ಆಯಿಶಾ, ಕುಮಾರಸ್ವಾಮಿ, ಅಣ್ಣಪ್ಪ, ಜಮಾತೆ ಇಸ್ಲಾಮಿ ಹಿಂದ್‍ನ ಬಾಷಾ ಸಾಬ್ ಮತ್ತು ಆಬಿದ್ ಹುಸೇನ್, ಮುಸ್ತಫಾ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.