ಚನ್ನಗಿರಿ: ಸ್ವರ್ಣಗೌರಿ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲ್ಲೂಕಿನ ಎಲ್ಲೆಡೆ ಶ್ರಧ್ಧಾ, ಭಕ್ತಿಯಿಂದ ಆಚರಿಸಲಾಯಿತು.
ಪ್ರತಿ ವರ್ಷ ಭಾದ್ರಪದ ಮಾಸದ ಆರಂಭದೊಂದಿಗೆ ಗೌರಿಹಬ್ಬ ಅಡಿಯಿಡುತ್ತದೆ. ಈ ಅವಧಿಯಲ್ಲಿ ಸುರಿಯುವ ಮಳೆಯಿಂದಾಗಿ ನೆಲ ಬಸಿರಾಗಿ ಹಸಿರು ಚಿರುಗುರುತ್ತದೆ. ಗೌರಿಯು ಪ್ರಕೃತಿಮಾತೆಯ ಸಂಕೇತವಾಗಿದ್ದು, ಗೌರಿಗೆ ಹಸಿರು ಸೀರೆ, ಬಳೆಗಳನ್ನು ತೊಡಿಸಿ ಹಬ್ಬ ಆಚರಿಸಲಾಗುತ್ತದೆ.
ಅರಿಸಿನದಿಂದ ತಯಾರಿಸಿದ ಗೌರಿ ವಿಗ್ರಹವನ್ನು ಪ್ರತಿಷ್ಠಾಪಿಸಿ, ಗೆಜ್ಜೆ, ವಸ್ತ್ರಗಳಿಂದ ಅಲಂಕರಿಸಲಾಗುತ್ತದೆ. ಮಹಿಳೆಯರು ಉಪವಾಸದಲ್ಲಿ ವ್ರತಾಚರಣೆ ಆರಂಭಿಸುತ್ತಾರೆ. ಹದಿನಾರು ಸುತ್ತಿನ ದಾರವನ್ನು ಪೂಜಿಸಿ, ದೇವಿಗೌರಿಯ ಆಶೀರ್ವಾದ ಎಂಬ ನಂಬಿಕೆಯಿಂದ ಕೈಗಳಿಗೆ ಕಟ್ಟಿಕೊಳ್ಳುತ್ತಾರೆ. ಹೋಳಿಗೆ, ಪಾಯಸ, ಕೋಸುಂಬರಿ ಸೇರಿದಂತೆ ಬಗೆ ಬಗೆಯ ಖಾದ್ಯಗಳನ್ನು ದೇವಿಗೆ ನೈವೇದ್ಯ ಮಾಡಿ ಮಹಿಳೆಯರಿಗೆ ಬಾಗಿನ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.