ADVERTISEMENT

ಚನ್ನಗಿರಿ: ಗಂಧದ ಮರ ಕಡಿದ ಮೂವರ ಬಂಧನ  

ಶ್ರೀಗಂಧ ವಶ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 3:57 IST
Last Updated 15 ಸೆಪ್ಟೆಂಬರ್ 2020, 3:57 IST
ವಶಪಡಿಸಿಕೊಂಡ ಶ್ರೀಗಂಧದ ತುಂಡುಗಳು, ಆರೋಪಿಗಳ ಜೊತೆಗೆ ಎಸಿಎಫ್‌ ಸುಬ್ರಮಣ್ಯ, ಆನಂದ್,  ಡಿಆರ್‌ಎಫ್ ವಾಜಿಯಾ ಬೇಗಂ ಪಾಲ್ಗೊಂಡಿದ್ದರು.
ವಶಪಡಿಸಿಕೊಂಡ ಶ್ರೀಗಂಧದ ತುಂಡುಗಳು, ಆರೋಪಿಗಳ ಜೊತೆಗೆ ಎಸಿಎಫ್‌ ಸುಬ್ರಮಣ್ಯ, ಆನಂದ್,  ಡಿಆರ್‌ಎಫ್ ವಾಜಿಯಾ ಬೇಗಂ ಪಾಲ್ಗೊಂಡಿದ್ದರು.   

ಚನ್ನಗಿರಿ: ತಾಲ್ಲೂಕಿನ ಮರವಂಜಿ ಶಾಖಾ ವ್ಯಾಪ್ತಿಯ ಮಸಣಿಕೆರೆ ಅರಣ್ಯ ಪ್ರದೇಶದ ನೆಡುತೋಪಿನಲ್ಲಿ ಶ್ರೀಗಂಧದ ಮರವನ್ನು ಕಡಿಯುತ್ತಿದ್ದಾಗ ಮೂವರ‌ನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಂಧಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಚಿಕ್ಕಾನವಂಗಲ ಗ್ರಾಮದ ಸಂತೋಷ್, ಬಸವರಾಜ್ ಹಾಗೂ ರಾಮು ಬಂಧಿತರು.

ಭಾನುವಾರ ರಾತ್ರಿ ಶ್ರೀಗಂಧವನ್ನು ಕಡಿದು ತುಂಡು ಮಾಡುತ್ತಿದ್ದಾಗ ಚನ್ನಗಿರಿ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ₹20 ಸಾವಿರ ಮೌಲ್ಯದ 13 ಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.