ADVERTISEMENT

ದಾವಣಗೆರೆ: ಶತಕದ ಗಡಿ ದಾಟಿದ ಪೆಟ್ರೋಲ್ ದರ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 3:17 IST
Last Updated 8 ಜೂನ್ 2021, 3:17 IST
p
p   

ದಾವಣಗೆರೆ: ಜಿಲ್ಲೆಯಲ್ಲಿ ಪೆಟ್ರೋಲ್ ದರಶತಕದ ಗಡಿ ದಾಟಿದೆ. ದಾವಣಗೆರೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ₹ 100.17ಕ್ಕೆ ಏರಿಕೆ ಕಂಡರೆ, ಡೀಸೆಲ್ ದರ ಒಂದು ಲೀಟರ್‌ಗೆ ₹ 92.83 ಆಗಿದೆ.

ಕಳೆದ ತಿಂಗಳು ಇದೇ ಸಮಯದಲ್ಲಿ ಪೆಟ್ರೋಲ್ ದರ ₹ 95.99 ಇದ್ದರೆ ಡೀಸೆಲ್ ದರ ₹88.06 ಇತ್ತು. ಆ ಮೂಲಕ ಒಂದು ತಿಂಗಳಲ್ಲಿ ಪೆಟ್ರೋಲ್ ₹ 4.18 ಹೆಚ್ಚಾದರೆ, ಡೀಸೆಲ್ ದರ ₹ 4.77 ಏರಿಕೆ ಕಂಡಿದೆ.

ಮೂರು ದಿವಸ ನಿರಂತರ ಏರಿಕೆ: ಮೇ 4ರಿಂದ 6ರವರೆಗೆ ಮೂರು ದಿವಸ ಇಂಧನ ದರ ನಿರಂತರವಾಗಿ ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ 29 ಪೈಸೆ, 18 ಪೈಸೆ, 24 ಪೈಸೆ ಏರಿಕೆ ಕಂಡಿದ್ದರೆ, ಡೀಸೆಲ್ ದರ ಒಂದು ಲೀಟರ್‌ಗೆ ಕ್ರಮವಾಗಿ 32, 20 ಹಾಗೂ 30 ಪೈಸೆಗಳಿಗೆ ಏರಿಕೆಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.