ಮಲೇಬೆನ್ನೂರು: ಸಮೀಪದ ನೆಹರೂ ನಗರ ಕ್ಯಾಂಪಿನ ನಿವಾಸಿ ಲಕ್ಷ್ಮಿಅವರ ಮೇಲೆ ಮುಖ ಮುಚ್ಚಿಕೊಂಡು ಬಂದು ದಾಳಿ ನಡೆಸಿದ ಕಳ್ಳ, ಅವರು ಕೊರಳಲ್ಲಿ ಧರಿಸಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೋದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಲಕ್ಷ್ಮಿ ಅವರು ತಮ್ಮ ಮನೆಯ ಹೊರಗೆ ಕೈಕಾಲು ತೊಳೆದುಕೊಳ್ಳುತ್ತಿದ್ದ ವೇಳೆ ಕಳ್ಳ ಕೃತ್ಯ ಎಸಗಿದ್ದಾನೆ. ಒಟ್ಟು 22 ಗ್ರಾಂ ತೂಕದ ಸರದಲ್ಲಿ 13 ಗ್ರಾಂ ಎಗರಿಸಿದ್ದು, 9 ಗ್ರಾಂ ಅಲ್ಲಿಯೇ ತುಂಡಾಗಿ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನದ ಸರದ ಮೌಲ್ಯ ₹ 63,000 ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.