ADVERTISEMENT

ದಾವಣಗೆರೆ | ಟೊಮೆಟೊ ದರ ಕುಸಿತ: ರೈತ ಕಂಗಾಲು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 7:19 IST
Last Updated 14 ಮಾರ್ಚ್ 2024, 7:19 IST
<div class="paragraphs"><p>ದಾವಣಗೆರೆಯ ಪಿ.ಜೆ. ಬಡಾವಣೆಯ ಮಳಿಗೆಯೊಂದರಲ್ಲಿ ಮಹಿಳೆಯೊಬ್ಬರು ಟೊಮೆಟೊ ಖರೀದಿಸುತ್ತಿರುವುದು.</p></div>

ದಾವಣಗೆರೆಯ ಪಿ.ಜೆ. ಬಡಾವಣೆಯ ಮಳಿಗೆಯೊಂದರಲ್ಲಿ ಮಹಿಳೆಯೊಬ್ಬರು ಟೊಮೆಟೊ ಖರೀದಿಸುತ್ತಿರುವುದು.

   

–ಪ್ರಜಾವಾಣಿ ಚಿತ್ರ

ದಾವಣಗೆರೆ: 2023ರ ಜುಲೈ ತಿಂಗಳಲ್ಲಿ ಒಂದು ಕೆ.ಜಿ. ಟೊಮೆಟೊಗೆ ₹100 ಇದ್ದಿದ್ದು, ಪ್ರಸ್ತುತ ಒಂದು ಕೆ.ಜಿ. ಟೊಮೆಟೊಗೆ ₹10ಕ್ಕೆ ಇಳಿದಿದೆ.

ADVERTISEMENT

ಬೆಲೆ ಇಳಿಕೆಯಿಂದಾಗಿ ಗ್ರಾಹಕರಿಗೆ ಖುಷಿಯಾದರೂ ರೈತರಿಗೆ ನಷ್ಟವಾಗಿದೆ. ಕಳೆದ ವರ್ಷ ಬಂಪರ್ ಬೆಲೆ ಸಿಕ್ಕಾಗ ರೈತರು ಖುಷಿಪಟ್ಟಿದ್ದರು. ಈಗ ಏಕಾಏಕಿ ಬೆಲೆ ಇಳಿಕೆಯಿಂದ ರೈತರಿಗೆ ನಿರಾಶೆಯಾಗಿದೆ.

‘ದಾವಣಗೆರೆ, ಮಾಯಕೊಂಡ ಭಾಗಗಳಲ್ಲಿ ಹೆಚ್ಚಾಗಿ ಟೊಮೆಟೊ ಬೆಳೆಯಲು ಆರಂಭಿಸಿದ್ದು, ಉತ್ತಮವಾಗಿ ಫಸಲು ಬಂದಿದೆ. ಆದರೆ ಸೂಕ್ತ ದರ ಸಿಕ್ಕಿಲ್ಲ. ಅಲ್ಲದೇ ದೆಹಲಿ, ರಾಜಸ್ತಾನ ಮುಂತಾದ ಭಾಗಗಳಿಗೆ ರಫ್ತಾಗುತ್ತಿದ್ದ ಟೊಮೆಟೊ ಈ ಸಲ ನಿಂತಿರುವುದು ದರ ಇಳಿಯಲು ಕಾರಣ’ ಎಂದು ಜಿಲ್ಲಾ ಬೀದಿ ಬದಿ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಸ್.ಇಸ್ಮಾಯಿಲ್ ತಿಳಿಸಿದರು.

ಈಗ ಒಂದು ಬಾಕ್ಸ್ (20ರಿಂದ 25 ಕೆ.ಜಿ) ₹80ರಿಂದ ₹100 ಇದ್ದು, ಕೆ.ಆರ್.ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಟೊಮೆಟೊ ₹8ರಿಂದ ₹10ಕ್ಕೆ ಮಾರಾಟವಾಗುತ್ತಿದೆ. ಇದರಿಂದ ರೈತರು ಹಾಗೂ ವ್ಯಾಪಾರಿಗಳಿಗೆ ನಷ್ಟವಾಗಿದೆ ಎಂದು ಹೇಳಿದರು.

‘ಟೊಮೆಟೊ ದರ ಕಡಿಮೆಯಾಗಿದ್ದು, ವ್ಯಾಪಾರಿಗಳಿಗೆ ಲಾಭ ಸಿಗುತ್ತಿಲ್ಲ. ಒಂದು ಬಾಕ್ಸ್ ಟೊಮೊಟೊ ₹100ರಿಂದ ₹120 ಇದ್ದು, ಅಷ್ಟು ಬೆಲೆಗೆ ತಂದು ಮಾರಾಟ ಮಾಡಿದರೂ ನಷ್ಟವಾಗುತ್ತಿದೆ’ ಎಂದು ವ್ಯಾಪಾರಿ ಶೀಲಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.