ADVERTISEMENT

ಕೆಪಿಸಿಸಿ ವೀಕ್ಷಕರಿಗೆ ಟ್ರೇಸರ್ ಐಡಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 16:06 IST
Last Updated 29 ಜೂನ್ 2020, 16:06 IST
ಟ್ರೇಸರ್ ಐಡಿ
ಟ್ರೇಸರ್ ಐಡಿ   

ದಾವಣಗೆರೆ: ಪಕ್ಷ ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಕಾಂಗ್ರೆಸ್ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ.

ವೀಕ್ಷಕರ ಕಾರ್ಯವೈಖರಿಯ ಬಗ್ಗೆ ನಿಗಾ ವಹಿಸಲು ಕೆಪಿಸಿಸಿಯಿಂದ ಟ್ರೇಸರ್ ಐಡಿ ನೀಡಲಾಗಿದೆ. ಇದಕ್ಕೆ ಜಿಪಿಎಸ್ ಅಳವಡಿಸಿದ್ದು, ವೀಕ್ಷಕರು ಎಲ್ಲಿ ಹೋಗುತ್ತಿದ್ದಾರೆ. ಏನು ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತದೆ. ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಲ್ಪನೆ.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ನಂಬರ್‌ಗಳನ್ನು ಇದಕ್ಕೆ ಅಳವಡಿಸಲಾಗಿದೆ. ಈ ಮೂವರ ನಂಬರ್‌ಗೆ ಮಾತ್ರ ಕರೆ ಮಾಡಬಹುದು. ಬೇರೆ ಯಾರಿಗೂ ಅವಕಾಶವಿಲ್ಲ. ಅದರಲ್ಲಿರುವ ಎಸ್‌ಒಎಸ್‌ ಬಟನ್ ಒತ್ತಿ ಹಿಡಿದರೆ ಮೂವರಿಗೂ ಕರೆ ಹೋಗುವಂತೆ ಇದನ್ನು ಅಳವಡಿಸಲಾಗಿದೆ.

ADVERTISEMENT

‘ಶಾಲೆಯ ಮಕ್ಕಳು, ಫೀಲ್ಡ್‌ ವರ್ಕ್ ಮಾಡುವವರಿಗೆ ಇದು ಉಪಯೋಗವಾಗುತ್ತದೆ. ರಾಜಕಾರಣದಲ್ಲಿ ನಾವು ಬಳಸಿಕೊಳ್ಳುತ್ತಿದ್ದೇವೆ. ಪಕ್ಷದಲ್ಲಿ ಪ್ರಾಮಾಣಿಕರಾಗಿ ಕೆಲಸ ಮಾಡುವವರನ್ನು ಗುರುತಿಸುವುದು. ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವುದು ಇದರ ಉದ್ದೇಶ’ ಎನ್ನುತ್ತಾರೆ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆಂಪರಾಜು.

‘ಒಂದು ಕ್ಷೇತ್ರದಲ್ಲಿ ಎರಡೂ ಇಲ್ಲವೇ ಮೂರು ಬ್ಲಾಕ್‌ಗಳು ಇರುತ್ತವೆ. ರಾಜ್ಯದಾದ್ಯಂತ 500 ಮಂದಿ ವೀಕ್ಷಕರಿಗೆ ಈ ಟ್ರೇಸರ್‌ ಐಡಿಯನ್ನು ನೀಡಿದ್ದು, ಇದರ ಬೆಲೆ ಒಂದಕ್ಕೆ ₹6 ಸಾವಿರವಾಗುತ್ತದೆ’ ಎನ್ನುತ್ತಾರೆ.

‘‍ಪ್ರಾಮಾಣಿಕ ಕಾರ್ಯಕರ್ತರಿಗೆ ಕಾಂಗ್ರೆಸ್ ಒತ್ತು ನೀಡುತ್ತಿದೆ. ಸುಳ್ಳು ಹೇಳಿದರೆ ನಡೆಯುವುದಿಲ್ಲ. ಪಕ್ಷ ಬಲಪಡಿಸಲು ಇದು ಸಹಕಾರಿ, ಸೋಮಾರಿಗಳಿಗೆ ಅವಕಾಶವಿಲ್ಲ’ ಎನ್ನುತ್ತಾರೆ ಕೆಪಿಸಿಸಿ ವೀಕ್ಷಕ ಡಿ. ಬಸವರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.