ADVERTISEMENT

ಪಾರಂಪರಿಕ ವೈದ್ಯಕೀಯ ಚಿಕಿತ್ಸೆ ಪರಿಣಾಮಕಾರಿ: ವಿಷ್ಣಪ್ಪ ಎನ್. ಕೋಟಿಹಾಳ್

​ಪ್ರಜಾವಾಣಿ ವಾರ್ತೆ
Published 15 ಮೇ 2025, 15:38 IST
Last Updated 15 ಮೇ 2025, 15:38 IST
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ ಗ್ರಾಮದಲ್ಲಿ ಪಾರಂಪರಿಕ ವೈದ್ಯಕೀಯ ತಪಾಸಣಾ ಉಚಿತ ಶಿಬಿರ ನಡೆಯಿತು
ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ ಗ್ರಾಮದಲ್ಲಿ ಪಾರಂಪರಿಕ ವೈದ್ಯಕೀಯ ತಪಾಸಣಾ ಉಚಿತ ಶಿಬಿರ ನಡೆಯಿತು   

ಕಡರನಾಯ್ಕನಹಳ್ಳಿ: ‘ಅಡ್ಡ ಪರಿಣಾಮಗಳಿಲ್ಲದ, ಕಡಿಮೆ ಖರ್ಚಿನ ಚಿಕಿತ್ಸೆ ಪಾರಂಪರಿಕ ವೈದ್ಯಕೀಯ ಪದ್ಧತಿಯಲ್ಲಿ ಲಭ್ಯವಿದ್ದು, ಪಾರ್ಶ್ವವಾಯುಗೆ ಒಳಗಾದ ಬಹುತೇಕರು ಇದಕ್ಕೆ ಒಳಪಡುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ಪಾರಂಪರಿಕ ವೈದ್ಯ ಪರಿಷತ್ತಿನ ಗೌರವಾಧ್ಯಕ್ಷ ವಿಷ್ಣಪ್ಪ ಎನ್. ಕೋಟಿಹಾಳ್ ತಿಳಿಸಿದರು.

ಸಮೀಪದ ಉಕ್ಕಡಗಾತ್ರಿ ಅಜ್ಜಯ್ಯನ ದೇವಸ್ಥಾನದಲ್ಲಿ ಕರ್ನಾಟಕ ವೈದ್ಯ ಪರಿಷತ್ ಮತ್ತು ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಪಾರಂಪರಿಕ ವೈದ್ಯ ಪದ್ಧತಿ ನಮ್ಮನ್ನು ಆರೋಗ್ಯವಾಗಿಟ್ಟಿದೆ. ಇದು ಸಾರ್ವತ್ರಿಕವಾಗಬೇಕು ಎಂದು ಕರಿ ಬಸವೇಶ್ವರ ಗದ್ದುಗೆ ಟ್ರಸ್ಟ್ ಸಮಿತಿ ಕಾರ್ಯದರ್ಶಿ ಎಸ್. ಸುರೇಶ್ ತಿಳಿಸಿದರು.

ADVERTISEMENT

ಸರಳ ಚಿಕಿತ್ಸಾ ವಿಧಾನದ ಬಗ್ಗೆ ವೈದ್ಯೆ ಶಿವಲೀಲಾ ಬಾಪೂಗೌಡ ಪಾಟೀಲ್ ಪ್ರಾತ್ಯಕ್ಷಿಕೆ ನೀಡಿದರು. ಇನ್ನೂರಕ್ಕೂ ಹೆಚ್ಚು ಜನರು ತಪಾಸಣೆಗೆ ಒಳಗಾದರು. ವೈದ್ಯರಾದ ವಿ.ನಾಗರಾಜ್, ಶಾಂತನಗೌಡ ಎಸ್. ಪಾಟೀಲ್, ರೇವಣಪ್ಪ ಬಿ. ಬುಳ್ಳಾಪುರ, ಸತ್ಯನಾರಾಯಣ ವೆಂಕಣ್ಣನವರ, ಕೃಷ್ಣಮೂರ್ತಿ, ದೇವಸ್ಥಾನದ ಟ್ರಸ್ಟ್ ಸದಸ್ಯರಾದ ಗದಿಗೆಪ್ಪ, ರಾಮನಗೌಡ, ಪ್ರಕಾಶ್ ಕೋಟೇರ, ವೀರೇಶ್ ಪಾಟೀಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.