ADVERTISEMENT

ತ್ಯಾವಣಿಗೆ | ಭಾವನೆಗಳು ಶಿವಮಯವಾಗಬೇಕು: ಪಾಂಡೋಮಟ್ಟಿ ಶ್ರೀ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 2:42 IST
Last Updated 15 ಫೆಬ್ರುವರಿ 2026, 2:42 IST
ತ್ಯಾವಣಿಗೆಯ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ. ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ  ಹಿರಿಯರನ್ನು ಸನ್ಮಾನಿಸಿದರು
ತ್ಯಾವಣಿಗೆಯ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ. ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ  ಹಿರಿಯರನ್ನು ಸನ್ಮಾನಿಸಿದರು   

ತ್ಯಾವಣಿಗೆ: ಮನುಷ್ಯರು ಇನ್ನೊಬ್ಬರ ಮನಸ್ಸು ನೋಯಿಸಬಾರದು, ಭಾವನೆಗಳು ಶಿವಮಯವಾಗಿರಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.

ತ್ಯಾವಣಿಗೆ ಗ್ರಾಮದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ. ವತಿಯಿಂದ ನಡೆದ ಶಿವರಾತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನಷ್ಯರ ಮನಸ್ಸನ್ನು ಪರಿವರ್ತಿಸಲು ಹಬ್ಬಗಳು ಬರುತ್ತವೆ. ದುಶ್ಚಟಗಳು, ದುಷ್ಟಗುಣಗಳನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯಬೇಕಿದೆ. ನಡೆ ನುಡಿ ಎರಡೂ ಒಂದಾದಾಗ ಉತ್ತಮರಾಗಲು ಸಾಧ್ಯ ಎಂದು ತಿಳಿಸಿದರು.

ADVERTISEMENT

‘ಸತ್ಯಶರಣರಿಗೆ ದಿನವೂ ಶಿವರಾತ್ರಿ. ದಿನವೂ ಶಿವನನ್ನು ಮನಸ್ಸಿನಲ್ಲಿ ನೆನೆಯಬೇಕು’ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿ.ವಿ.ಯ ದಾವಣಗೆರೆಯ ಸಂಚಾಲಕಿ ಲೀಲಾಜಿ ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯರನ್ನು ಸನ್ಮಾನಿಸಲಾಯಿತು. ಮೌಂಟ್ ಅಬು ಪ್ರಧಾನ ಕೇಂದ್ರದ ಸವಿತಾ, ತ್ಯಾವಣಿಗೆ ಈಶ್ವರೀಯ ವಿ.ವಿ. ಸಂಚಾಲಕಿ ಬಿ.ಕೆ. ಲೋಲಾಕ್ಷಿ , ರುದ್ರೇಶ್, ದಿಗ್ಗಹಳ್ಳಿ ಬಸವರಾಜ್, ದಾದಾಪೀರ್ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.