ADVERTISEMENT

ರೈಲ್ವೆ; ಹಳೆ ಯೋಜನೆಗಳಿಗೆ ಚಾಲನೆ

₹39,000 ಕೋಟಿ ವೆಚ್ಚದಲ್ಲಿ ಕಾಮಗಾರಿ: ವಿ.ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:45 IST
Last Updated 8 ಮೇ 2025, 15:45 IST
ವಿ.ಸೋಮಣ್ಣ
ವಿ.ಸೋಮಣ್ಣ   

ದಾವಣಗೆರೆ: ‘ರಾಜ್ಯದಲ್ಲಿ ಬಾಕಿ ಇರುವ ಮೂರು ದಶಕಗಳಷ್ಟು ಹಳೆಯ ರೈಲ್ವೆ ಯೋಜನೆಗಳನ್ನು ₹39,000 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗುತ್ತಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ತಿಳಿಸಿದರು.

‘ಹಂತ ಹಂತವಾಗಿ 2028ರ ಒಳಗಾಗಿ ಎಲ್ಲ ಬಾಕಿ ಕಾಮಗಾರಿಗಳನ್ನೂ ಮುಗಿಸುವ ತೀರ್ಮಾನ ಕೈಗೊಂಡಿದ್ದೇವೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

‘ಇದೇ 15ರಂದು ಗದಗ – ತಳಕಲ್ – ಕುಷ್ಟಗಿ ಮಾರ್ಗದಲ್ಲಿ ರೈಲು ಸೇವೆಗೆ ಚಾಲನೆ ನೀಡಲಾಗುತ್ತಿದೆ. ಸಿಂಧನೂರು – ರಾಯಚೂರಿನ ರೈಲು ಮಾರ್ಗದ ಕಾಮಗಾರಿ ನಡೆದಿದೆ. ಲೋಕಾಪುರ – ಕಜ್ಜಿದೋಣಿ ರೈಲ್ವೆ ಹಳಿ ಕಾಮಗಾರಿಯೂ ನಡೆಯುತ್ತಿದೆ ಎಂದರು.

ADVERTISEMENT

‘ತುಮಕೂರು – ದಾವಣಗೆರೆ ನೂತನ ರೈಲು ಮಾರ್ಗಕ್ಕಾಗಿ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಶೇ 85ರಷ್ಟು ಮುಗಿದಿದೆ. ಈ ಬಗ್ಗೆ ಚರ್ಚೆಗೆ 17ರಂದು ಚಿತ್ರದುರ್ಗದಲ್ಲಿ ಸಭೆ ಕರೆಯಲಾಗಿದೆ. ‘ಸಂಸದ ಗೋವಿಂದ ಕಾರಜೋಳ ಸೇರಿದಂತೆ ರೈಲ್ವೆ, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

‘2027ರ ಡಿಸೆಂಬರ್‌ ವೇಳೆಗೆ 192 ಕಿ.ಮೀ. ಅಂತರದ ಈ ಮಾರ್ಗ ಹಾಗೂ ರಾಯದುರ್ಗ– ತುಮಕೂರು ಮಾರ್ಗದ ಲೋಕಾರ್ಪಣೆ ನಡೆಯಲಿದೆ’ ಎಂದರು.

‘ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 23 ಮೇಲ್ಸೇತುವೆ, ಕೆಳಸೇತುವೆಗಳ ಕಾಮಗಾರಿಯನ್ನು ₹960 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಶೇ 50ರಷ್ಟು ಕಾಮಗಾರಿ ಪೂರ್ಣಗೊಂಡಿದೆ’ ಎಂದು ತಿಳಿಸಿದರು.

ಹರಿಹರ ಶಾಸಕ ಬಿ.ಪಿ.ಹರೀಶ್ ಸೇರಿದಂತೆ ಹಲವು ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.