ನ್ಯಾಮತಿ: ‘ಯುವಜನತೆ ಅದರಲ್ಲೂ ವಾಲ್ಮೀಕಿ ಸಮುದಾಯದವರು ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಸಂಘಟಿತರಾಗಬೇಕು’ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಬೇಡರ ಕಣ್ಣಪ್ಪ ಸೇವಾ ಸಮಿತಿ, ಬೇಡರ ಕಣ್ಣಪ್ಪ ವಿನಾಯಕ ಸೇವಾ ಸಮಿತಿ, ವಾಲ್ಮೀಕಿ ಮಹಿಳಾ ಸಮುದಾಯ ಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಬಯಲುಸೀಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ತಾಲ್ಲೂಕು ಪಂಚಾಯಿತಿ ಇಒ ಎಚ್.ವಿ.ರಾಘವೇಂದ್ರ, ಪಟ್ಟಣ ಪಂಚಾಯಿತಿ ಸಿಒ ಪಿ.ಗಣೇಶರಾವ್, ಪಿಎಸ್‌ಐ ಹೊಳೆಬಸಪ್ಪ ಹೊಳಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಎಲ್.ಉಮಾ, ಬಗರ್‌ಹುಕುಂ ಸಮಿತಿ ಎನ್.ಸುನೀತಾ, ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಎಚ್.ರಂಗಸ್ವಾಮಿ, ಅಧ್ಯಕ್ಷ ವೀರಭದ್ರಪ್ಪ, ಕಾರ್ಯಾಧ್ಯಕ್ಷ ಎನ್.ವಿಜೇಂದ್ರಪ್ಪ ಉಪಸ್ಥಿತರಿದ್ದರು.
ವಾಲ್ಮೀಕಿ ನಾಯಕ ಸಮುದಾಯದ ಅಧ್ಯಕ್ಷ ಬಿ.ಸೋಮಶೇಖರ, ಶಿಕ್ಷಕ ಪ್ರಶಸ್ತಿ ಪುರಸ್ಕೃತ ಟಿ.ಎಸ್. ರಂಗಸ್ವಾಮಿ, ಎನ್.ಜಿ.ಒ ಅಧ್ಯಕ್ಷ ಸಿದ್ದೇಶಪ್ಪ ಜಿಗಣಪ್ಪರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಾಲ್ಮೀಕಿ ಮಹರ್ಷಿ ಕುರಿತು ನಿವೃತ್ತ ಶಿಕ್ಷಣಾಧಿಕಾರಿ ಭರ್ಮಪ್ಪ ಮೈಸೂರು ಉಪನ್ಯಾಸ ನೀಡಿದರು.
ನಿವೃತ್ತ ಉಪತಹಶೀಲ್ದಾರ್ ಎನ್.ನಾಗರಾಜ ನೇತೃತ್ವದಲ್ಲಿ ವಿವಿಧ ಸಮಿತಿಯ ಸದಸ್ಯರು, ಮಹಿಳಾ ಸಮಿತಿಯವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.