
ಚನ್ನಗಿರಿ: ದೆಹಲಿಯಲ್ಲಿ ನಡೆದ ಭಯೋತ್ಪಾದಕರ ಕೃತ್ಯ ಖಂಡಿಸಿ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ದೇಶವಿರೋಧಿ ಶಕ್ತಿಗಳು ಮತ್ತು ವಿದ್ಯಾವಂತ ಮುಸ್ಲಿಂ ಭಯೋತ್ಪಾದಕರು ದೆಹಲಿಯ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟಿಸಿ ವಿಧ್ವಂಸಕ ಕೃತ್ಯ ಎಸಗಿದ್ದಾರೆ. ತಪ್ಪಿತಸ್ಥರನ್ನು ಪತ್ತೆಹಚ್ಚಿ ಕೇಂದ್ರ ಸರ್ಕಾರ ಅವರನ್ನು ಗಲ್ಲಿಗೇರಿಸಬೇಕು ಪ್ರತಿಭಟನಕಾರರು ಆಗ್ರಹಿಸಿದರು.
ದೇಶದ ರಕ್ಷಣೆಗಾಗಿ ಸಂಘ ಪರಿವಾರ ಯಾವ ತ್ಯಾಗಕ್ಕೂ ಸಿದ್ಧವಿದೆ. ಧರ್ಮ ಹಾಗೂ ಸಂಸ್ಕೃತಿ ಉಳಿಸಲು ಇಸ್ರೇಲ್ ಮಾದರಿ ಹೋರಾಟ ಅನಿವಾರ್ಯವಾಗಿದೆ. ಹಿಂದೂ ಸಂಸ್ಕೃತಿ ಉಳಿದರೆ ಮಾತ್ರ ಜಗತ್ತಿಗೆ ಶಾಂತಿ. ಇಲ್ಲದಿದ್ದರೆ ಮನುಕುಲದ ನಾಶಕ್ಕೆ ದಾರಿಯಾಗುತ್ತದೆ ಎಂದು ತಿಳಿಸಿದರು.
ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಾಗಿ ತಹಶೀಲ್ದಾರ್ ಕಚೇರಿ ತಲುಪಿತು. ತಹಶೀಲ್ದಾರ್ ಕೆ.ಆರ್. ರುಕ್ಮಿಣಿಬಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಎಚ್‌ಪಿ ಅಧ್ಯಕ್ಷ ಜಯ್ಯಣ್ಣ, ಜಿಲ್ಲಾ ಘಟಕದ ಸಂಚಾಲಕ ಮಂಜುನಾಥ್, ರವಿಚಂದ್ರ, ಶ್ರೀನಿವಾಸ್, ಮಧು, ಚಿಕ್ಕಣ್ಣ, ಕೆ.ಆರ್. ಗೋಪಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.