ADVERTISEMENT

ಗ್ರಾಮಗಳ ಉದ್ಧಾರದಿಂದ ದೇಶದ ಪ್ರಗತಿ

ಕೋಲ್ಕುಂಟೆ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ನಟ ಶರತ್ ಲೋಹಿತಾಶ್ವ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 3:45 IST
Last Updated 20 ಡಿಸೆಂಬರ್ 2021, 3:45 IST
ದಾವಣಗೆರೆ ತಾಲ್ಲೂಕು ಕೋಲ್ಕುಂಟೆಯಲ್ಲಿ ಭಾನುವಾರ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿಯಲ್ಲಿ ಪುನಶ್ಚೇತನಗೊಳಿಸಲಾದ ಕೆರೆ ಹಸ್ತಾಂತರ ಹಾಗೂ ವಿವಿಧೋದ್ದೇಶ ಸಮುಚ್ಚಯ ನಿರ್ಮಾಣ ಭೂಮಿಪೂಜೆ ಕಾರ್ಯಕ್ರಮವನ್ನು ನಟ ಶರತ್ ಲೋಹಿತಾಶ್ವ ಉದ್ಘಾಟಿಸಿದರು.
ದಾವಣಗೆರೆ ತಾಲ್ಲೂಕು ಕೋಲ್ಕುಂಟೆಯಲ್ಲಿ ಭಾನುವಾರ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿಯಲ್ಲಿ ಪುನಶ್ಚೇತನಗೊಳಿಸಲಾದ ಕೆರೆ ಹಸ್ತಾಂತರ ಹಾಗೂ ವಿವಿಧೋದ್ದೇಶ ಸಮುಚ್ಚಯ ನಿರ್ಮಾಣ ಭೂಮಿಪೂಜೆ ಕಾರ್ಯಕ್ರಮವನ್ನು ನಟ ಶರತ್ ಲೋಹಿತಾಶ್ವ ಉದ್ಘಾಟಿಸಿದರು.   

ದಾವಣಗೆರೆ: ಗ್ರಾಮಗಳ ಉದ್ಧಾರವಾಗಬೇಕು. ಮಹಿಳೆಯರು ಸುರಕ್ಷಿತವಾಗಿ ಬಾಳುವ ಪರಿಸರ ನಿರ್ಮಾಣವಾಗಬೇಕು. ಆಗ ದೇಶ ಅಭಿವೃದ್ಧಿಯಾಗುತ್ತದೆ ಎಂದು ನಟ ಶರತ್ ಲೋಹಿತಾಶ್ವ ಹೇಳಿದರು.

ಕೋಲ್ಕುಂಟೆ ಗ್ರಾಮಾಭ್ಯುದ್ಯಯ ಸಂಘ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸಹಯೋಗದಲ್ಲಿ ತಾಲ್ಲೂಕಿನ ಕೋಲ್ಕುಂಟೆ ಗ್ರಾಮದಲ್ಲಿ ಭಾನುವಾರ ‘ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿಯಲ್ಲಿ ಪುನಶ್ಚೇತನಗೊಳಿಸಲಾದ ಕೆರೆ ಹಸ್ತಾಂತರ ಹಾಗೂ ವಿವಿಧೋದ್ದೇಶ ಸಮುಚ್ಚಯ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾನು ಎನ್ನುವುದರಿಂದ ಯಾವ ಕೆಲಸವನ್ನೂ ಮಾಡಲು ಆಗುವುದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಸಮಷ್ಠಿ ಪ್ರಜ್ಞೆ ಬೇಕು’ ಎಂದು ತಿಳಿಸಿದರು.

ADVERTISEMENT

‘ಸುಚೇಂದ್ರ ಪ್ರಸಾದ್ ನನ್ನ 30 ವರ್ಷದ ಗೆಳೆಯ, ಅವರು ಸ್ವಂತ ಕೆಲಸಕ್ಕಾಗಿ ಯೋಚನೆ ಮಾಡಿದವರಲ್ಲ. ಬದಲಾಗಿ ಸಮಷ್ಠಿ ಪ್ರಜ್ಞೆ ಇಟ್ಟುಕೊಂಡವರು. ಸಮಾಜದ ಬಗ್ಗೆ ಅಪರಿಮಿತ ಪ್ರೀತಿ ಇರಿಸಿಕೊಂಡ ಅವರು ಅದ್ಭುತ ಸಮಾಜ ನಿರ್ಮಾಣ ಆಗಬೇಕು ಎಂಬ ಬಗ್ಗೆ ದಿನನಿತ್ಯ ಯೋಚಿಸುತ್ತಿರುತ್ತಾರೆ. ಅವರ ಮಾರ್ಗದರ್ಶನದಲ್ಲಿ ಗ್ರಾಮಾಭಿವೃದ್ಧಿ ಕೆಲಸಗಳು ನಡೆಯಲಿ’ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೋಲ್ಕುಂಟೆ ಗ್ರಾಮಾಭ್ಯುದ್ಯಯ ಸಂಘದ ಗೌರವಾಧ್ಯಕ್ಷ ಸುಚೇಂದ್ರ ಪ್ರಸಾದ್, ‘ನನ್ನ ತಾಯಿ ಹಾಗೂ ತಾತನ ಊರಾದ ಕೋಲ್ಕುಂಟೆಯನ್ನು ಮಾದರಿ ಗ್ರಾಮವನ್ನಾಗಿ ಮಾಡುವ ದೃಢ ಸಂಕಲ್ಪ ಹೊಂದಿದ್ದು, ಸಮಸ್ಥ ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಇಚ್ಛಾಶಕ್ತಿ ಪ್ರದರ್ಶಿಸಬೇಕು’ ಎಂದು ಕೋರಿದರು.

ತಹಶೀಲ್ದಾರ್ ಬಿ.ಎನ್.ಗಿರೀಶ್, ‘ದಾವಣಗೆರೆ ತಾಲ್ಲೂಕಿನಲ್ಲಿ ಒಟ್ಟು 53 ಕೆರೆಗಳಿದ್ದು, ಎಲ್ಲ ಕೆರೆಗಳನ್ನು ಇದೇ ಮೊದಲ ಬಾರಿಗೆ ಸಮೀಕ್ಷೆ ಮಾಡಿಸಲಾಗಿದ್ದು, ಇದರಲ್ಲಿ 17 ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನಿರ್ದೇಶಕ ಜಯಂತ್ ಪೂಜಾರಿ,ಮಾಜಿ ಶಾಸಕ ಬಸವರಾಜನಾಯ್ಕ, ಬಹುಭಾಷಾ ಚಿತ್ರ ನಿರ್ಮಾತೃ ರಾಜಶೇಖರ್, ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ. ಜೀವನಮೂರ್ತಿ, ಆರ್.ಆರ್.ರಮೇಶ್‍ಬಾಬು ಮಾತನಾಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ದೇವೇಂದ್ರಪ್ಪ ಶ್ಯಾಗಲೆ, ಕುರ್ಕಿ ಸಾಯಿ ಸಮಿತಿ ಅಧ್ಯಕ್ಷ ಕೆ.ಎಚ್. ಕೊಟ್ರಪ್ಪ, ಕೈದಾಳೆ ಗ್ರಾಮ ಪಂಚಾಯಿತಿ ಪಿಡಿಒ ವಿದ್ಯಾವತಿ, ಹದಡಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಸಿ.ನಿಂಗಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಮೀನಾ ಶ್ರೀನಿವಾಸ್, ಮಾನವ ಕಂಪ್ಯೂಟರ್ ಬಸವರಾಜ್ ಉಮ್ರಾಣಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಆಶಾ ಬಸವರಾಜ್, ಕೋಲ್ಕುಂಟೆ ಗಾಮಾಭ್ಯುದ್ಯಯ ಸಂಘದ ಅಧ್ಯಕ್ಷ ಕೆ.ಜಿ. ಮಂಜುನಾಥ್, ರಂಗಕರ್ಮಿ ಬಾ.ಮ. ಬಸವರಾಜಯ್ಯ ಅವರೂ ಇದ್ದರು.

ಎಸ್. ಲೋಕೇಶಪ್ಪ ಸ್ವಾಗತಿಸಿದರು. ಶಿಕ್ಷಕ ವೀರೇಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.