
ಪ್ರಜಾವಾಣಿ ವಾರ್ತೆ
ಹೊನ್ನಾಳಿ: ತಾಲ್ಲೂಕಿನ ಯಕ್ಕನಹಳ್ಳಿ ಗ್ರಾಮದ ಬಸವೇಶ್ವರಸ್ವಾಮಿ ರಥೋತ್ಸವ ಶುಕ್ರವಾರ ಬೆಳಗಿನಜಾವ ಸಡಗರ, ಸಂಭ್ರಮದಿಂದ ನಡೆಯಿತು.
ಗುರುವಾರ ಬೆಳಿಗ್ಗೆ ಉಚ್ಛಾಯ ಮಹೋತ್ಸವ (ಸಣ್ಣತೇರು) ಗ್ರಾಮದ ರಾಜಬೀದಿಗಳಲ್ಲಿ ನಡೆಯಿತು. ಮಾಯಾಂಬಿಕಾ ದೇವಿ ಮತ್ತು ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಬಾಯಿಗೆ ಬೀಗ ಹಾಕಿಕೊಳ್ಳುವ ಕಾರ್ಯಕ್ರಮ ನಡೆಯಿತು. ಉರುಳು ಸೇವೆ, ಜವಳ ಕಾರ್ಯಕ್ರಮ ನಡೆದವು.
ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮಾಡಲಾಯಿತು. ಓಕಳಿ ಕಾರ್ಯಕ್ರಮ ಹಾಗೂ ಬಸವೇಶ್ವರಸ್ವಾಮಿ ದೇವರ ಅಡ್ಡಪಲ್ಲಕ್ಕಿ ಉತ್ಸವ ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.