ದಾವಣಗೆರೆ: ರಂಗಕರ್ಮಿ, ಹಾಸ್ಯ ಕಲಾವಿದ ಯಶವಂತ ಸರದೇಶಪಾಂಡೆ ಅವರಿಗೂ ದಾವಣಗೆರೆಗೂ ಅವಿನಾಭಾವ ಸಂಬಂಧವಿತ್ತು. ನಗರದ ವೃತ್ತಿ ರಂಗಭೂಮಿ ರಂಗಾಯಣದ ಮೊದಲ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.
ಸರದೇಶಪಾಂಡೆ ಅವರು ಹೃದಯಾಘಾತದಿಂದ ನಿಧನರಾದ ಮಾಹಿತಿ ತಿಳಿಯುತ್ತಿದ್ದಂತೆ ಮಧ್ಯ ಕರ್ನಾಟಕದ ರಂಗಭೂಮಿ ಕಲಾವಿದರು ದುಃಖಿತರಾದರು. ರಂಗಭೂಮಿಯ ನಂಟನ್ನು ಮೆಲುಕು ಹಾಕಿದರು.
ವೃತ್ತಿ ರಂಗಭೂಮಿ ರಂಗಾಯಣದ ಕಚೇರಿಯನ್ನು ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ ತೆರೆದಿದ್ದರು. 2020ರಿಂದ 2023ರವರೆಗೆ ನಿರ್ದೇಶಕರಾಗಿದ್ದರು. ರಂಗಾಯಣಕ್ಕೆ ಚೌಕಟ್ಟು ರೂಪಿಸಲು ಪ್ರಯತ್ನಿಸಿದರು.
‘ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ‘ಪ್ರತಿಮಾ ಸಭಾ’ದ ಒಡಗೂಡಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅವರ ನಿಧನದಿಂದ ರಂಗಭೂಮಿಗೆ ದೊಡ್ಡ ನಷ್ಟ ಉಂಟಾಗಿದೆ’ ಎಂದು ಪ್ರತಿಮಾ ಸಭಾ ಅಧ್ಯಕ್ಷ ಬಾ.ಮ. ಬಸವರಾಜಯ್ಯ ನೆನಪಿಸಿಕೊಂಡರು.
ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿಯ ತಪೋವನ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ಜುಲೈ 5ರಂದು ನಡೆದ ‘ಅಮರ ಮಧುರ ಪ್ರೇಮ’ದಲ್ಲಿ ಯಶವಂತ ಸರದೇಶಪಾಂಡೆ ಬಣ್ಣ ಹಚ್ಚಿದ್ದರು.
ಯಶವಂತ ಸರದೇಶಪಾಂಡೆ ಹಾಸ್ಯ ನಾಟಕಗಳ ಮೂಲಕ ಗಮನ ಸೆಳೆದಿದ್ದರು. ವೃತ್ತಿ ರಂಗಭೂಮಿ ರಂಗಾಯಣದ ಮೊದಲ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆಮಲ್ಲಿಕಾರ್ಜುನ ಕಡಕೋಳ ನಿರ್ದೇಶಕ ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.