ADVERTISEMENT

ಶಾಸಕ ಸ್ಥಾನಕ್ಕೆ ಯತ್ನಾಳ ರಾಜೀನಾಮೆ ನೀಡಲಿ: ರೇಣುಕಾಚಾರ್ಯ

ಪಕ್ಷ ಕಟ್ಟೋದಾದರೆ ಮರು ಚುನಾವಣೆ ಎದುರಿಸಲಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 23:37 IST
Last Updated 1 ಏಪ್ರಿಲ್ 2025, 23:37 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

ದಾವಣಗೆರೆ: ‘ಬಸನಗೌಡ ಪಾಟೀಲ ಯತ್ನಾಳ ಅವರು ಹೊಸ ಪಕ್ಷ ಸ್ಥಾಪಿಸಲು ಮುಂದಾದರೆ ಸ್ವಾಗತಿಸುತ್ತೇನೆ. ಅದಕ್ಕೂ ಮೊದಲು ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮರು ಚುನಾವಣೆ ಎದುರಿಸಲಿ. ಚುನಾವಣೆಯಲ್ಲಿ ಅವರು ಠೇವಣಿ ಕಳೆದುಕೊಳ್ಳುತ್ತಾರಷ್ಟೇ!’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇರೆಯವರು ಹೇಳಿದ್ದನ್ನೇ ಕೇಳಿದರೆ ಬಲಿಪಶು ಆಗುತ್ತೀರಿ ಎಂದು ಅವರಿಗೆ ಮೊದಲೇ ಹೇಳಿದ್ದೆ. ಅದರಂತೆ ಯತ್ನಾಳ ಬಲಿಪಶು ಆದರು. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಅವರು ಹಿಂದುತ್ವ ಎನ್ನುತ್ತಿದ್ದಾರೆ. ಆಚಾರದಲ್ಲಿ ಹಿಂದುತ್ವ ಇರಬೇಕೇ ವಿನಾ ಸುಮ್ಮನೇ ಬೊಗಳೆ ಬಿಡಬಾರದು. ಇನ್ನಾದರೂ ಅವರು ಸರ್ವಾಧಿಕಾರಿ ಧೋರಣೆ ಬಿಡಬೇಕು’ ಎಂದು ಮನವಿ ಮಾಡಿದರು.

‘ಅವರು ಹೊಸ ಪಕ್ಷ ಕಟ್ಟಿದರೆ, ಚುನಾವಣೆಯಲ್ಲಿ ಅವರಿಗೆ ಅಭ್ಯರ್ಥಿಗಳೇ ಸಿಗುವುದಿಲ್ಲ. ಹಗಲುಗನಸು ಕಾಣುವುದನ್ನು ಬಿಡಲಿ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.