ADVERTISEMENT

ಎಲ್ಲ ಶಾಸಕರಿಗೂ ಅನುದಾನ ನೀಡಲು ಆಗದು: ಸಚಿವ ಬೈರತಿ ಬಸವರಾಜ್

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 10:29 IST
Last Updated 7 ಮಾರ್ಚ್ 2020, 10:29 IST
   

ದಾವಣಗೆರೆ:ಎಲ್ಲಾ ಶಾಸಕರಿಗೂ ಅನುದಾನ ನೀಡಲು ಸಾಧ್ಯವಿಲ್ಲ. ಇಲಾಖಾವಾರು ಅನುದಾನ ಬಿಡುಗಡೆಯಾದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಇಲಾಖೆವಾರು ಆಯಾ ಕ್ಷೇತ್ರಕ್ಕೆ ಏನು ಬೇಕೋ ಅದು ಬಂದೇ ಬರುತ್ತದೆ ಎಂದು ನಗರಾಭಿವೃದ್ಧಿಸಚಿವ ಬೈರತಿ ಬಸವರಾಜ್‌ ಹೇಳಿದ್ದಾರೆ.

ಹೊನ್ನಾಳಿಯಲ್ಲಿ ಮಾತನಾಡಿದ ಸಚಿವಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು ಅವರ ಬಾಯಲ್ಲಿ ‘ದರಿದ್ರ ಬಜೆಟ್’ ಎಂಬ ಮಾತು ಬರಬಾರದು ಎಂದೂ ಹೇಳಿದರು.

ಯಡಿಯೂರಪ್ಪ ಅವರು, ರಾಜ್ಯಕ್ಕೆ ಸುಭೀಕ್ಷವಾದ ಬಜೆಟ್ ನೀಡಿದ್ದು, ರೈಲು ಬಿಡುವಂತಹ ಬಜೆಟ್ ಅಲ್ಲ. ವಸ್ತುಸ್ಥಿತಿಗೆ ಅನುಗುಣವಾಗಿ ಬಜೆಟ್ ಮಾಡಿದ್ದಾರೆ. ಈ ಬಜೆಟ್‌ನಿಂದ ರಾಜ್ಯದ ಅಭಿವೃದ್ಧಿಯಾಗುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.

ADVERTISEMENT

ಎಲ್ಲಾ ಶಾಸಕರಿಗೂ ಕೂಡ ಅನುದಾನ ನೀಡಲು ಸಾಧ್ಯವಿಲ್ಲ. ಇಲಾಖಾವಾರು ಅನುದಾನ ಬಿಡುಗಡೆಯಾದರೆ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಇಲಾಖೆವಾರು ಆಯಾ ಕ್ಷೇತ್ರಕ್ಕೆ ಏನು ಬೇಕೋ ಅದು ಬಂದೇ ಬರುತ್ತದೆ ಎಂದರು.

ದೊರೆಸ್ವಾಮಿಯವರ ಅವರ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸ್ವಾತಂತ್ರ್ಯ ಯೋಧರು ಸ್ವಾತಂತ್ರ್ಯ ಯೋಧರ ರೀತಿ ಇರಬೇಕು. ಆ ರೀತಿ ಇದ್ದರೆ ಈ ಎಲ್ಲಾ ಘಟನೆಗಳು ನಡೆಯುತ್ತಿರಲಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.