ADVERTISEMENT

ದಾವಣಗೆರೆ | ಆನ್‍ಲೈನ್‍ನಲ್ಲಿ ವಚನಾನಂದ ಸ್ವಾಮೀಜಿ ಯೋಗ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 5:16 IST
Last Updated 21 ಜೂನ್ 2020, 5:16 IST
   

ದಾವಣಗೆರೆ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದಿಂದ ನಡೆದ ಕಾರ್ಯಕ್ರಮದಲ್ಲಿ ‘ಶ್ವಾಸಗುರು’ಎಂದೇ ಖ್ಯಾತರಾದ ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಯೋಗ ಪ್ರದರ್ಶನ ನೀಡಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಆನ್‍ಲೈನ್‍ನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾವಿರಾರು ಮಂದಿ ವೀಕ್ಷಿಸಿ ಮನೆಯಲ್ಲೇ ವೀಕ್ಷಿಸಿ ಮನೆಯಲ್ಲೇ ಯೋಗ ಮಾಡಿದರು.

ವಚನಾನಂದ ಸ್ವಾಮೀಜಿ ಯೋಗದ ವಿವಿಧ ಆಸನಗಳನ್ನು ಹೇಳಿಕೊಟ್ಟರು. ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮೊದಲಾದವರು ಪಾಲ್ಗೊಂಡು ಯೋಗ ಪ್ರದರ್ಶಿಸಿದರು.

ADVERTISEMENT

ವಚನಾನಂದ ಸ್ವಾಮೀಜಿ ಮಾತನಾಡಿ, ಈ ಜಗತ್ತನ್ನು ಆವರಿಸಿ ಕೊರೊನಾ ಮಹಾಮಾರಿ ನಮ್ಮ ಮನೆಗೆ ಬಂದು ಮನಸ್ಸು ಹಾಗೂ ದೇಹವನ್ನು ತಲ್ಲಣಗೊಳಿಸಿದೆ. ಯೋಗದ ಮೂಲಕ ತಲ್ಲಣಗೊಂಡಿರುವ ಮನಸ್ಸನ್ನು ಸಶಕ್ತಗೊಳಿಸುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

‘ಯೋಗ ಸಾವಿರಾರು ವರ್ಷಗಳಷ್ಟೂ ಹಳೆಯದಾದರೂ ಅದಕ್ಕೆ ಹೊಸತನ ನೀಡಿದವರು ಪ್ರಧಾನಿ ನರೇಂದ್ರ ಮೋದಿ, ಅವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗಲಿ’ಎಂದು ಆಶಿಸಿದರು.

ವಚನಾನಂದ ಸ್ವಾಮೀಜಿ ಅವರ ಯೋಗಾಸನವನ್ನು 20 ಮಂದಿ ಫೇಸ್‍ಬುಕ್ ಲೈವ್ ಮಾಡಿದರು. ಜಿಲ್ಲಾ ಯೋಗ ಒಕ್ಕೂಟದ ವಾಸುದೇವ ರಾಯ್ಕರ್, ಎಂ.ಶಿವಪ್ಪ, ಡಾ.ಯು.ಸಿದ್ದೇಶ್, ಜಯಣ್ಣ ಆಯುಷ್ ಅಧಿಕಾರಿ ಶಂಕರೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.