ಮಾಯಕೊಂಡ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಗಿಟ್ಟೆ ಮಾಧವ ವಿಠಲರಾವ್ ಭೇಟಿ ನೀಡಿ ಪರಿಶೀಲಿಸಿದರು.
ಕಟ್ಟಡದ ಸ್ಥಿತಿ ಅವಲೋಕಿಸಿದ ಅವರು, ‘ಹಳೆಯ ಕಟ್ಟಡ ತೀರಾ ಹಾಳಾಗಿದೆ. ಅಧಿಕಾರಿಗಳ ಜೊತೆ ಸಮಾಲೋಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಗ್ರಾಮದ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಐದಾರು ವರ್ಷಗಳಾದರೂ ಮುಗಿಸದೆ ಇರುವ ಮಾಹಿತಿಯನ್ನ ಸಾರ್ವಜನಿಕರು ತಿಳಿಸಿದಾಗ, ಸ್ಥಳ ಪರಿಶೀಲಿಸಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಶಾಲೆಯ ಉಪ ಪ್ರಾಚಾರ್ಯ ನಾಗರಾಜಪ್ಪ, ಹಳೆಯ ಶಾಲಾ ಕಟ್ಟಡ ತೀರಾ ಶಿಥಿಲವಾಗಿದ್ದು, ಆರ್‌ಸಿಸಿ ಸಿಮೆಂಟ್ ಚಕ್ಕೆಗಳು ಬೀಳುತ್ತಿವೆ. ವಿದ್ಯಾರ್ಥಿಗಳು, ಶಿಕ್ಷಕರು ಭಯದಲ್ಲಿಯೇ ತರಗತಿಯಲ್ಲಿರಬೇಕಿದೆ. ಆದ್ದರಿಂದ ಇರುವ ಉತ್ತಮ ಕೊಠಡಿಗಳಲ್ಲಿಯೇ ತರಗತಿ ನಡೆಸುತ್ತಿದ್ದೇವೆ. ಶೀಘ್ರ ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಿಕೊಡಬೇಕು’ ಎಂದು ಮನವಿ ಮಾಡಿದರು.
ಈ ವೇಳೆ ತಾಲ್ಲೂಕು ಪಂಚಾಯಿತಿ ಇಒ ರಾಮಬೋವಿ, ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್, ಎಂಜಿನಿಯರ್ ಬಾಸ್ಕರ್, ಶಿಕ್ಷಕ ರವಿಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.