ADVERTISEMENT

ಕ್ರೀಡಾಂಗಣಕ್ಕೆ 2 ಲಕ್ಷ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 9:45 IST
Last Updated 14 ಜನವರಿ 2012, 9:45 IST

ಬ್ಯಾಹಟ್ಟಿ: ವಾಲಿಬಾಲ್ ನೆಲೆಯಾದ ಬ್ಯಾಹಟ್ಟಿಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ `ಪಂಚಾಯಿತಿ ಯುವ ಕ್ರೀಡಾ ಔರ್ ಖೇಲ್ ಅಭಿಯಾನ್~ (ಪೈಕಾ) ಯೋಜನೆಯಡಿ  2 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ.

ಸುಸಜ್ಜಿತವಾದ ಮೈದಾನವಿರದೇ ರಾಷ್ಟ್ರಮಟ್ಟದವರೆಗೆ ಸಾಧನೆ ಮಾಡಿದ ಬ್ಯಾಹಟ್ಟಿ ಕ್ರೀಡಾಪಟುಗಳ ಕುರಿತು `ಪ್ರಜಾವಾಣಿ~ ಜ. 5ರ  ಸಂಚಿಕೆಯಲ್ಲಿ `ಬ್ಯಾಹಟ್ಟಿಯ ವಾಲಿ ಬಾಲ್ ತಾರೆಗಳು~ ಎಂಬ ಶೀರ್ಷಿಕೆ ಯಲ್ಲಿ ವರದಿ ಪ್ರಕಟಿಸಿತ್ತು.

ವರದಿಗೆ ಸ್ಪಂದಿಸಿರುವ ಅಧಿಕಾರಿ ಗಳು ಬ್ಯಾಹಟ್ಟಿ ವಾಲಿಬಾಲ್ ಕ್ಲಬ್‌ಗೆ ಪತ್ರ ಬರೆದಿದ್ದಾರೆ.

ಪ್ರತಿ ವರ್ಷ ಬೇರೆ ರಾಜ್ಯಗಳಿಗೆ ವಾಲಿಬಾಲ್ ಟೂರ್ನಿಗೆ ಹೋಗುವ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ಮಾಡಲಾಗುವುದು. ಮಾರ್ಚ್‌ನಲ್ಲಿ ಬ್ಯಾಹಟ್ಟಿಯಲ್ಲಿ ರಾಜ್ಯ ಮಟ್ಟದ ವಾಲಿಬಾಲ್ ತರಬೇತಿ ಶಿಬಿರವನ್ನು ಏರ್ಪಡಿಸಲಾಗುವುದು ಎಂದೂ ಪತ್ರ ದಲ್ಲಿ ಹೇಳಲಾಗಿದೆ.

ಹೊನಲು ಬೆಳಕಿನಲ್ಲಿ ಅಭ್ಯಾಸ ಮಾಡುವುದಕ್ಕೆ ಬೇಕಾದ ವಿದ್ಯುತ್ ಸೌಕರ್ಯ ಒದಗಿಸಿಕೊಡಲಾ ಗುವುದು. ಧಾರವಾಡ ಜಿಲ್ಲಾ ಪಂಚಾ ಯಿತಿ ಸಹ ಈ ಕ್ರೀಡಾಪಟುಗಳಿಗೆ ಬೇಕಾದ ಮೂಲಸೌಕರ್ಯ ನೀಡ ಲಾಗುವುದು ಎಂದೂ ತಿಳಿಸಲಾಗಿದೆ.

ನಿರ್ಧಾರಕ್ಕೆ ಹರ್ಷ: ಕ್ರೀಡಾಂಗಣ ನಿರ್ಮಾಣಕ್ಕೆ ಹಣ ನೀಡಲು ನಿರ್ಧ ರಿಸಿದ ಕ್ರೀಡಾ ಇಲಾಖೆಯನ್ನು ಅಭಿ ನಂದಿಸಿರುವ ಕ್ರೀಡಾಪಟು ಅಶ್ವಿನಿ ಪಾಟೀಲ, ಇಲಾಖೆಗೆ ಈ ಸಮಸ್ಯೆ ತಿಳಿಸುವಲ್ಲಿ ಪಾತ್ರ ವಹಿಸಿದ `ಪ್ರಜಾ ವಾಣಿ~ಗೂ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.