ADVERTISEMENT

ಧಾರವಾಡದಲ್ಲಿ ಯುವಜನೋತ್ಸವ 9ರಿಂದ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 9:35 IST
Last Updated 7 ಅಕ್ಟೋಬರ್ 2012, 9:35 IST

ವಿಜಾಪುರ: ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಅಂತರ್ ಮಹಾ ವಿದ್ಯಾಲಯಗಳ ಯುವಜನೋತ್ಸವ ಲ ಧಾರವಾಡದ  ಶ್ರಿ ಸತ್ಯಸಾಯಿ ಮಹಿಳಾ ಗೃಹ ವಿಜ್ಞಾನ ಮಹಾ ವಿದ್ಯಾಲ ಯದಲ್ಲಿ ಅ.9 ರಿಂದ 11ರ ವರೆಗೆ  ನಡೆಯಲಿದೆ.

ಅ. 9 ರಂದು ಬೆಳಿಗ್ಗೆ 11ಕ್ಕೆ ಆಂಧ್ರಪ್ರದೇಶದ ಶ್ರಿ ಸತ್ಯಸಾಯಿ ಇನ್ಸ್‌ಟಿಟ್ಯೂಟ್ ಆಫ್ ಹಾಯರ್ ಲರ್ನಿಂಗ್, ಕುಲಪತಿ ಪ್ರೊ. ಜೆ. ಶಶಿಧರ ಪ್ರಸಾದ ಯುವಜನೋತ್ಸವದ ಉದ್ಘಾ ಟನೆ ಮಾಡಲಿದ್ದಾರೆ.

ಕರ್ನಾಟಕ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಮೀನಾ ಆರ್ ಚಂದಾವರಕರ ಸಭೆಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ಪ್ರಲ್ಲಾದ  ಜೋಶಿ, ಶ್ರಿ ನಾಗೇಶ ಢಾಕಪ್ಪ,  ಡಾ.ವಿನೋಧಿನಿ ಮಹಿಷಿ, ಪ್ರಾಚಾರ್ಯ ಡಾ. ರೇಣುಕಾ ಮೇಟಿ ಭಾಗವಹಿಸ ಲಿದ್ದಾರೆ.

ಉತ್ತರ ಕರ್ನಾಟಕದ 13 ಜಿಲ್ಲೆಗಳ  ವ್ಯಾಪ್ತ್ತಿಯಲ್ಲಿಯ 89 ಮಹಿಳಾ ಪದವಿ ಕಾಲೇಜುಗಳ ಸುಮಾರು 400 ಜನ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳ ಲ್ಲಿದ್ದಾರೆ.

 ಅ. 11ರಂದು ಮಧ್ಯಾಹ್ನ 11.30ಕ್ಕೆ ನಡೆಯಲಿರುವ ಸಮಾ ರೋಪ ಸಮಾರಂಭಕ್ಕೆ ಮುಖ್ಯ ಅತಿಥಿ ಗಳಾಗಿ ಧಾರವಾಡ ಜಿಲ್ಲಾಧಿಕಾರಿ ಸಮೀರ ಶುಕ್ಲ ಆಗಮಿಸುವರು. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಜಿ.ಆರ್. ನಾಯಿಕ ಸಭೆಯ ಅಧ್ಯಕ್ಷತೆ ವಹಿಸುವರು.  ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ಡಾ. ಪಾಂಡುರಂಗ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು  ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಉಚಿತ ನೇತ್ರ ತಪಾಸಣಾ ಶಿಬಿರ 9ರಂದು

ಹುಬ್ಬಳ್ಳಿ: ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಸ್ಪಂದನ ಸಂಸ್ಥೆ, ವಿಶ್ವ ಮಧ್ವ ಮಹಾ ಪರಿಷತ್, ಗುರು ಮಹಿಪತಿರಾಜ ನೇತ್ರ ಸೇವಾ ಸಂಸ್ಥೆ ಹಾಗೂ ಡಾ.ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಆಶ್ರಯದಲ್ಲಿ ಇದೇ 9ರಂದು ಬೆಳಿಗ್ಗೆ 8.30 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಚಾಮುಂಡೇಶ್ವರಿನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.