ADVERTISEMENT

ಧಾರಾ ನಗರಿಯಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2013, 6:56 IST
Last Updated 8 ಜೂನ್ 2013, 6:56 IST

ಧಾರವಾಡ: ಮೋಡ ಮುಸುಕಿದ ಆಗಸದಿಂದ ಧರೆಗೆ ಇಳಿದ ವರುಣ ಅರ್ಧಗಂಟೆಗೂ ಹೆಚ್ಚುಕಾಲ ನಗರದೆಲ್ಲೆಡೆ ಸುರಿಯುವ ಮೂಲಕ ತಂಪನ್ನೆರೆದ.

ಶುಕ್ರವಾರ ಬೆಳಿಗ್ಗೆಯಿಂದಲೇ ಮೋಡವಿತ್ತು. ಮಧ್ಯಾಹ್ನದ ವೇಳೆಗೆ ಮೊದಲಿಗೆ ತುಂತುರು ಹನಿ ಸುರಿಯುವ ಮೂಲಕ ಆರಂಭವಾಗಿ ಕ್ರಮೇಣ ಬಿರುಸು ಪಡೆದುಕೊಂಡಿತು. ಮಳೆ ಸುರಿದಿದ್ದರಿಂದ ಮಾರುಕಟ್ಟೆ ಪ್ರದೇಶದಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಚಿತ್ರಮಂದಿರಗಳ ಮಧ್ಯಾಹ್ನದ ಶೋ ಜನರಿಲ್ಲದೇ ಭಣಗುಟ್ಟಿತು.

ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲೂ ಮಳೆಯಾಗಿದ್ದು, ಹೊಲಗಳಲ್ಲಿ ನೀರು ನಿಂತುಕೊಂಡಿದ್ದರಿಂದ ಹದ ಮಾಡಿಕೊಂಡ ರೈತರು ನೆಲ ಕೊಂಚ ಒಣಗಲು ಕಾಯುತ್ತಿದ್ದಾರೆ. ಇದರ ಮಧ್ಯೆಯೇ ಹಲವೆಡೆ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಕೃಷಿ ಇಲಾಖೆಯೂ ಸಹ ಅಗತ್ಯ ಬಿತ್ತನೆ ಬೀಜಗಳ ದಾಸ್ತಾನು ಮಾಡಿಕೊಂಡಿದ್ದು, ರೈತರಿಗೆ ವಿತರಿಸಲು ಸಜ್ಜಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.