ADVERTISEMENT

ಬಿಪಿಓ ತರಬೇತಿ ಕೇಂದ್ರ ಇಂದು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2012, 5:00 IST
Last Updated 3 ಮಾರ್ಚ್ 2012, 5:00 IST

ಹುಬ್ಬಳ್ಳಿ: ಬಿಪಿಓ (ಬಿಸಿನೆಸ್ ಪ್ರೊಸೆಸ್ ಓಟ್‌ಸೋರ್ಸಿಂಗ್) ತರಬೇತಿ ನೀಡುವ ಕೃತಿ ಬಿಸಿನೆಸ್ ಸೊಲ್ಯುಷನ್ಸ್ ಕೇಂದ್ರ ಇದೇ 3ರಂದು ಸಂಜೆ 5 ಗಂಟೆಗೆ ನಗರದ ಐ.ಟಿ. ಪಾರ್ಕ್‌ನಲ್ಲಿ ಉದ್ಘಾಟನೆ ಯಾಗಲಿದೆ.

`ಕೇಂದ್ರವನ್ನು ಸಂಸದ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಪಿಯುಸಿ ಪಾಸಾದ ಇಲ್ಲವೆ ಫೇಲಾದ ಹಾಗೂ ಪದವೀಧರರಿಗೆ ಉದ್ಯೋಗ ಕುರಿತು ಮಾಹಿತಿ ಮತ್ತು ತರಬೇತಿ ನೀಡುವ ಸಲುವಾಗಿ ಈ ಕೇಂದ್ರವನ್ನು ಆರಂಭಿಸು ತ್ತಿದ್ದೇವೆ~ ಎಂದು ಕೃತಿ ಬಿಸಿನೆಸ್ ಸೊಲ್ಯುಷನ್ಸ್ ಕೇಂದ್ರದ ಪಾಲುದಾರ ರಾದ ವಾದಿರಾಜ ಚಿಪ್ಪಲಗಟ್ಟಿ ಹಾಗೂ ವಿಶ್ವನಾಥ ರಾಯದುರ್ಗ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಕಂಪ್ಯೂಟರ್ ಲ್ಯಾಬ್ ಹಾಗೂ ತರಗತಿ ಕೋಣೆಗಳನ್ನು ಒಳಗೊಂಡ ಕೇಂದ್ರದಲ್ಲಿ 25 ದಿನಗಳವರೆಗೆ ನಿತ್ಯ 2 ಗಂಟೆ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ರೂ 10,000 ಪ್ರವೇಶ ಶುಲ್ಕ ಕೊಡಬೇಕಾಗುತ್ತದೆ.
 
ಪ್ರತಿ ತಂಡದಲ್ಲಿ 20 ಅಭ್ಯರ್ಥಿಗಳನ್ನು ಆಯ್ಕೆಗೊಳಿಸ ಲಾಗುತ್ತದೆ. 35 ವರ್ಷದೊಳಗಿನವರು ತರಬೇತಿ ಪಡೆಯಬಹುದು. ತರಬೇತಿ ನಂತರ ವಿವಿಧ ಕಂಪೆನಿಗಳ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗು ತ್ತದೆ~ ಎಂದು ಅವರು ಹೇಳಿದರು.

`ಬಿಪಿಓದಲ್ಲಿ ಅನೇಕ ಉದ್ಯೋಗಗಳಿವೆ. ಆದರೆ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ಸಿಕ್ಕಿರುವುದಿಲ್ಲ. ತರಬೇತಿ ನೀಡುವ ಮೂಲಕ ಉದ್ಯೋಗ ಸಿಗಲು ನೆರವಾಗುವಂಥ ಕೆಲಸವನ್ನು ನಮ್ಮ ಕೇಂದ್ರ ಮಾಡುತ್ತದೆ~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.