
ಪ್ರಜಾವಾಣಿ ವಾರ್ತೆಧಾರವಾಡ: ಪೆರೋಲ್ ಮೇಲೆ ಬಿಡುಗಡೆ ಮಾಡಲು ನಿರಾಕರಿಸಿದ್ದರಿಂದ ಕೈದಿಯೊಬ್ಬ ಮರ ಹತ್ತಿ ಪ್ರತಿಭಟನೆಗೆ ಮುಂದಾದ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ನಡೆದಿದೆ.
ನವಲಗುಂದ ತಾಲ್ಲೂಕಿನ ಹನಮಂತಪ್ಪ ಹಡಪದ ಎಂಬುವ ಕೈದಿ ತನ್ನ ಸಂಬಂಧಿಕರ ಮದುವೆಗೆ ಹೋಗಲು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದ ಎನ್ನಲಾಗಿದೆ.
ಆದರೆ ಇದನ್ನು ಜೈಲು ಅಧಿಕಾರಿಗಳು ನಿರಾಕಸಿದ್ದರಿಂದ ಮರ ಹತ್ತಿ ಪ್ರತಿಭಟನೆಗೆ ಮುಂದಾಗಿದ್ದ. ತಕ್ಷಣವೇ ಜೈಲು ಸಿಬ್ಬಂದಿ ಆಗಮಿಸಿ ಮರದಿಂದ ಕೆಳಗಿಳಿಸಿದರೆನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.