ADVERTISEMENT

ವಿಜೃಂಭಣೆಯ ನಾಗಲಿಂಗಸ್ವಾಮಿ ಆರಾಧನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2013, 11:02 IST
Last Updated 13 ಜುಲೈ 2013, 11:02 IST

ನವಲಗುಂದ: ಪವಾಡ ಪುರುಷ ಅಜಾತ ನಾಗಲಿಂಗ ಸ್ವಾಮಿಗಳ 132ನೇ ಆರಾಧನಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ಸಮಾಧಿಗೆ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ಸಹಸ್ರಾರು ಭಕ್ತರ ನಡುವೆ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಮಧ್ಯಾಹ್ನ ನಡೆದ ಮಾದಲಿ ಪೂಜೆಯಲ್ಲಿ ಪಾಲ್ಗೊಂಡ ಭಕ್ತರು ಮಹಾಪ್ರಸಾದ ಸ್ವಿಕರಿಸಿ ಧನ್ಯರಾದರು.

ಸಂಜೆ ನಡೆದ 237ನೇ ನಾಗಲಿಂಗಾನುಭವಗೋಷ್ಠಿಯಲ್ಲಿ ಮಠದ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು.

ನಾಗಲಿಂಗಸ್ವಾಮಿ ಮಠದ ಪೀಠಾಧೀಶರಾದ ವೀರೇಂದ್ರಸ್ವಾಮೀಜಿ, ಅಡ್ನೂರ ದಾಸೋಹಮಠದ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ, ಹುಣಸ್ಯಾಳ ಸಿದ್ದಲಿಂಗ ಕೈವಲ್ಯಾಶ್ರಮದ ನಿಜಗುಣದೇವರು, ಹೊಳೆ ಆಲೂರು ಯಚ್ಚರಸ್ವಾಮಿ ಮಠದ ಯಚ್ಚರೇಶ್ವರ ಸ್ವಾಮೀಜಿ, ನರಗುಂದ ಪತ್ರಿವನ ಮಠದ ಬಸಯ್ಯಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ವರ್ತಕರ ಸಂಘದ ಅಧ್ಯಕ್ಷ ಆರ್.ಎನ್.ಧಾರವಾಡ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.  ನಾಗಲಿಂಗಸ್ವಾಮಿ ವಿದ್ಯಾಪೀಠದ ಗೌರವ ಕಾರ್ಯದರ್ಶಿ ಎಂ.ಎನ್.ಬಡಿಗೇರ ವರದಿ ವಾಚಿಸಿದರು. 

ನಿವೃತ್ತ ಶಿಕ್ಷಕ ಐ.ಎಂ.ಮನ್ವಾಚಾರ್ ಅವರಿಗೆ ನಾಗಲಿಂಗಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.