ADVERTISEMENT

`ಶೇ 69ರಷ್ಟು ಜನರಿಗೆ ಶೌಚಾಲಯವಿಲ್ಲ'

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 6:37 IST
Last Updated 22 ಡಿಸೆಂಬರ್ 2012, 6:37 IST

ಧಾರವಾಡ: `ಕಿತ್ತು ತಿನ್ನುವ ಬಡತನ, ಅನಕ್ಷರತೆ, ಅನಾರೋಗ್ಯ, ಅಪೌಷ್ಟಿಕತೆ ದೇಶವನ್ನು ಕಾಡುತ್ತಿವೆ. ಬಹಳಷ್ಟು ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಶೇ 69ರಷ್ಟು ಜನರಿಗೆ ಶೌಚಾ ಲಯ ವ್ಯವಸ್ಥೆ ಇಲ್ಲ. ಸುಮಾರು 25 ಕೋಟಿ ಜನರಿಗೆ ಆರೋಗ್ಯ ಸೇವೆ ದೊರೆಯುತ್ತಿಲ್ಲ' ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ವಿಷಾದಿಸಿದರು.

ಇಲ್ಲಿಯ ಕೆ.ಇ.ಬೋರ್ಡ್ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಮೃತ ಮಹೋತ್ಸವ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, `ಮಾನವ ಸಂಪನ್ಮೂಲ ಉತ್ಪಾದನಾ ಕ್ಷೇತ್ರದಲ್ಲಿ ನಾವು ಅತ್ಯಂತ ಕೆಳ ಮಟ್ಟದಲ್ಲಿದ್ದೇವೆ. ಆಶ್ಚರ್ಯ ವೆಂದರೆ ನಾವು ಭ್ರಷ್ಟಾಚಾರದಲ್ಲಿ ಉನ್ನತ ಸ್ಥಾನದಲ್ಲಿದ್ದೇವೆ. ದೇಶದಲ್ಲಿ 35 ಕೋಟಿ ಜನರಿಗೆ ಜನರಿಗೆ ಓದಲು ಬರೆಯಲು ಬರುವುದಿಲ್ಲ. ಶೇ 52ರಷ್ಟು ಪ್ರಾಥಮಿಕ ಶಾಲೆಗಳಲ್ಲಿ ಕೇವಲ ಒಬ್ಬರು ಶಿಕ್ಷಕರಿದ್ದಾರೆ.

ಅತ್ಯಂತ ವಿಷಾದಕರ ಸಂಗತಿ ಎಂದರೆ 20ರ ವಯೋಮಿತಿಯ ಅತ್ಯಂತ ಪ್ರತಿಭಾವಂತ, ಆದರ್ಶಮಯ ಯುವಕರು 40 ವರ್ಷ ತಲುಪು ವಲ್ಲಿ ನಿರಾಶೆ, ಅತಂತ್ರ ಮತ್ತು ಏನನ್ನೂ ಸಾಧಿಸ ಲಾರದಂಥ ವಾತಾವರಣವನ್ನು ಸೃಷ್ಟಿಸಿದ್ದೇವೆ. ಅದೇನೇ ಇದ್ದರೂ, ಈ ಎಲ್ಲ ಸಮಸ್ಯೆ, ಸವಾಲು ಗಳನ್ನು ಎದುರಿಸುವ ಆಶಾಭಾವನೆ ಇಂದು ನಮಗೆ ಬಂದಿದೆ.

ಯಾವುದೇ ಒಂದು ದೇಶ ಅಭಿವೃದ್ಧಿ ಪಥ ದಲ್ಲಿ ಸಾಗಬೇಕು ಎನ್ನುವುದಾದರೆ ಅಲ್ಲಿಯ ಯುವ ಕರು ಮತ್ತು ವಿದ್ಯಾರ್ಥಿಗಳು ಬಹುಮುಖ್ಯ. ಅವರ ಆತ್ಮವಿಶ್ವಾಸ ಮತ್ತು ನಂಬಿಕೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ' ಎಂದರು. `ನಮ್ಮ ಸುತ್ತಲೂ ಗುಣಾತ್ಮಕ ಬದಲಾವಣೆ ಗಳನ್ನು ಗಮನಿಸುತ್ತಿದ್ದೇನೆ. ತಮ್ಮ ಸುತ್ತಲಿನ ಕತ್ತಲನ್ನು ದೂರ ಮಾಡಿ, ಪ್ರತಿಯೊಬ್ಬರೂ ಬದುಕಲು ಉತ್ತಮ ವಾತಾವರಣ ನಿರ್ಮಿಸುವ ಶಕ್ತಿಯನ್ನು ಯುವಜನ ಹೊಂದಿದ್ದಾರೆ. ಇಂದಿನ ಯುವಕರು ಇನ್ನು 30 ವರ್ಷಗಳ ನಂತರ ಈ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ  ಪರಿವರ್ತಿಸಲಿದ್ದಾರೆ. ಈ ದೇಶ ಅಭಿಮಾನ ಪಡುವಂತೆ ಮಾಡಲಿದ್ದಾರೆ' ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೇರಳ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿ.ಎಸ್.ಮಳಿಮಠ, `ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಇಂದು ಅಪೇಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವಿಷಾದಿಸಿದರು.`ಪ್ರತಿಭಾವಂತರನ್ನು ಗುರುತಿಸುವ ವಾತಾವರ ಣವೇ ನಮ್ಮಲಿಲ್ಲ. ಚಾರಿತ್ರ್ಯವಂತ ವ್ಯಕ್ತಿಗಳನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಶಾಲೆಗಳು ಮತ್ತು ಶಿಕ್ಷಕರ ಮೇಲಿದೆ' ಎಂದು ಹೇಳಿದರು.

ಕೆ.ಇ.ಬೋರ್ಡ್ ಅಧ್ಯಕ್ಷ ಕೆ.ಎಸ್.ಅಮೂರ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.
ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ 75 ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಅರುಣ ನಾಡಗೀರ ವಂದಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎಲ್.ಪಾಟೀಲ, ಡಾ.ಆನಂದ ಕಬ್ಬೂರ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT