ಹುಬ್ಬಳ್ಳಿ: ‘ಸಾಮೂಹಿಕ ವಿವಾಹಗಳು ದುಂದು ವೆಚ್ಚಕ್ಕೆ ಕಡಿವಾಣ ಹಾಕುವುದರಿಂದಾಗಿ ಬಡವರಿಗೆ, ಮಧ್ಯಮ ವರ್ಗದವರಿಗೆ ಆರ್ಥಿಕವಾಗಿ ಅನುಕೂಲವಾಗುತ್ತದೆ’ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ನವಯುಗ ಸಂಘಟನೆ ವತಿಯಿಂದ ಅಧ್ಯಕ್ಷ ಕೃಷ್ಣಾ ಗಂಡಗಾಳೇಕರ ನೇತೃತ್ವದಲ್ಲಿ ನಗರದ ಅಕ್ಷಯ ಪಾರ್ಕ್ ಸಂತೆ ಮೈದಾನದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹದಲ್ಲಿ ನವ ವಧು–ವರರಿಗೆ ಶುಭಕೋರಿ ಅವರು ಮಾತನಾಡಿದರು.
ಬೆಳಿಗ್ಗೆ ನಡೆದ 12 ವಟುಗಳ ಉಪನಯನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ‘ನವಯುಗ ಸಂಘಟನೆ ಮತ್ತು ಕೃಷ್ಣಾ ಅವರ ಸಾಮಾಜಿಕ ಕಾರ್ಯವು ಇತರರಿಗೆ ಮಾದರಿ’ ಎಂದು ಶ್ಲಾಘಿಸಿದರು.
ನವಯುಗ ಸಂಘಟನೆ 25 ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸುತ್ತ ಬಂದಿದ್ದು, ಈ ಬಾರಿ 25 ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರಿನ ವಿನಯ್ ಗುರೂಜಿ ನವ ವಿವಾಹಿತರನ್ನು ಆಶೀರ್ವದಿಸಿದರು. ಸುಭಾಸ್ ಸಿಂಗ್ ಜಮಾದಾರ, ಪ್ರಕಾಶ್ ಕ್ಯಾರಕಟ್ಟಿ, ರವಿ ಬಂಕಾಪುರ, ರವಿ ನಾಯ್ಕ, ಶರಣು ಪಾಟೀಲ್, ನಾಗರಾಜ್ ಕಲಾಲ್, ಸಿದ್ದೇಶ್ ಕಬಾಡರ್, ಸುಬ್ರಮಣ್ಯ ಶಿರ್ಕೊಳ್, ಬಲಭೀಮ್ ಪೋದ್ದಾರ್, ಲೀಲಾವತಿ ಪಾಸ್ತೆ, ಸಂಗೀತಾ ಬದ್ದಿ, ರೇಖಾ ಸರ್ಜನ್, ನಾರಾಯಣ ಗಂಡಗಾಳೇಕರ, ಶ್ರೀನಿವಾಸ್ ತಪಾಸ್ಕರ್, ಪ್ರದೀಪ್ ಜಿಗಣಿಕರ್, ಟಿ. ಶಿವನಗೌಡ, ಕೃಷ್ಣ ಉಪ್ಪೇರ, ಬಸವರಾಜ್ ಬೆಳಗಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.