ADVERTISEMENT

ಅಣ್ಣಿಗೇರಿಯಲ್ಲಿ ಶೇ 72 ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 16:06 IST
Last Updated 27 ಡಿಸೆಂಬರ್ 2021, 16:06 IST
ಅಣ್ಣಿಗೇರಿಯ ಮತಗಟ್ಟೆ ಸಂಖ್ಯೆ 17ರಲ್ಲಿ ಕುಟುಂಬ ಸದಸ್ಯರೊಬ್ಬರ ಸಹಾಯದಿಂದ ವೃದ್ದೆಯೊಬ್ಬರು ಮತದಾನ ಕೇಂದ್ರಕ್ಕೆ ಬಂದರು
ಅಣ್ಣಿಗೇರಿಯ ಮತಗಟ್ಟೆ ಸಂಖ್ಯೆ 17ರಲ್ಲಿ ಕುಟುಂಬ ಸದಸ್ಯರೊಬ್ಬರ ಸಹಾಯದಿಂದ ವೃದ್ದೆಯೊಬ್ಬರು ಮತದಾನ ಕೇಂದ್ರಕ್ಕೆ ಬಂದರು   

ಅಣ್ಣಿಗೇರಿ: ಸ್ಥಳೀಯ ಪುರಸಭೆಗೆ ಸೋಮವಾರ ಶಾಂತಿಯುತವಾಗಿಮತದಾನ ನಡೆಯಿತು. 23 ವಾರ್ಡ್‌ಗಳ ಎಲ್ಲ 23 ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದ ಬಿರುಸಿನ ಮತದಾನ ನಡೆಯಿತು. ಒಟ್ಟು 21,561 ಮತದಾರರಿದ್ದು ಅದರಲ್ಲಿ ಪುರುಷರು 10,677, ಮಹಿಳೆಯರು 10,822, ಇತರೆ 2 ಇದ್ದಾರೆ. 7,896 ಪುರುಷರು, 7531 ಮಹಿಳೆಯರು ಹಾಗೂ 2 ಇತರೆ ಮತಚಲಾಯಿಸಿದ್ದಾರೆ. ಒಟ್ಟು ಶೇ 72ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್‌ ಮಂಜುನಾಥ ಅಮಾಸಿ ತಿಳಿಸಿದರು.

ಪ್ರತಿ ಮತದಾನ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಥರ್ಮೊಮೀಟರ್‌ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಇದುವರೆಗೆ ಕೋವಿಡ್‌ ಲಸಿಕೆ ಪಡೆಯದವರಿಗೆ ಲಸಿಕೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ನಗರದ ಶಾಸಕರ ಮಾದರಿ ಕೇಂದ್ರ ನಂ. 1ರ ಮುಂಭಾಗದಲ್ಲಿ ಸಾವಿರಾರು ಕಾರ್ಯಕರ್ತರು ಜಮಾಯಿಸಿ ಕೆಲಹೊತ್ತು ಬಿಗುವಿನ ವಾತಾವರಣ ಉಂಟಾಗಿತ್ತು. ಪೊಲೀಸರು ಅವರನ್ನು ಕದಲಿಸಿ, ವಾತಾವರಣ ತಿಳಿಗೊಳಿಸಿದರು.

ADVERTISEMENT

ಸ್ಥಳೀಯ ಶ್ರೀ ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿಡಿ.30 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.