ಹುಬ್ಬಳ್ಳಿ: ‘ಉದ್ಯೋಗ ವ್ಯವಹಾರದಲ್ಲಿ ಯಶಸ್ವಿಯಾಗಬೇಕಾದರೆ ಬ್ರಾಹ್ಮಣರು ಸಂಘಟಿತರಾಗುವುದು ಅತ್ಯವಶ್ಯ’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಉಪಾಧ್ಯಕ್ಷ ಲಕ್ಷ್ಮಣ ಕುಲಕರ್ಣಿ ಹೇಳಿದರು.
ನಗರದಲ್ಲಿ ನಡೆದ ವಿಪ್ರ ಬ್ಯುಸಿನೆಸ್ ಫೋರಂನ ಮಾಸಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ವಿಶ್ವ ವಿಪ್ರ ಸೇವಾ ಟ್ರಸ್ಟ್ ಯಾವಾಗಲೂ ಜೊತೆಯಾಗಿಯೇ ಇರಬೇಕು ಎಂದು ಆಶಿಸಿದರು.
ಪದಾಧಿಕಾರಿಗಳಾದ ನಂದನ ಇನಾಮದಾರ, ಸಂತೋಷ ಮೊಕಾಶಿ, ವೀಣಾ ಅಂಗಡಿ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.