ಹುಬ್ಬಳ್ಳಿ: ಇಲ್ಲಿನ ಗೋಪನಕೊಪ್ಪದ ಮಹಾಲಕ್ಷ್ಮಿ ಬಡಾವಣೆಯಲ್ಲಿ ‘ನಮ್ಮ ಕ್ಲಿನಿಕ್’ ಅನ್ನು ಶಾಸಕ ಮಹೇಶ ಟೆಂಗಿನಕಾಯಿ ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ನಗರಗಳಲ್ಲಿ ವಾಸವಿರುವ ಬಡವರು, ಕಾರ್ಮಿಕರಿಗೆ ಸುಲಭವಾಗಿ ವೈದ್ಯಕೀಯ ಸೌಲಭ್ಯ ದೊರಕಲಿ ಎಂಬ ಉದ್ದೇಶದಿಂದ ‘ನಮ್ಮ ಕ್ಲಿನಿಕ್’ ಆರಂಭಿಸಲಾಗಿದೆ. ರೋಗಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ವೈದ್ಯರು ಕಾರ್ಯ ನಿರ್ವಹಿಸಬೇಕು. ‘ನಮ್ಮ ಕ್ಲಿನಿಕ್’ ಅನ್ನು ಕ್ಷೇತ್ರದ ಜನತೆ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.
ಡಾ. ಎಸ್.ಎಂ. ಹೊನಕೇರಿ, ಡಾ. ಹುಲಗಣ್ಣ ಇಂಜಗನರಿ, ಡಾ. ಸುಜಾತಾ ಹಸವಿಮಠ, ಡಾ. ಮಹೇಶ ಚಿತ್ತರಗಿ, ಶ್ರೀಶೈಲ ಜೋಡಳ್ಳಿ, ಪ್ರಮುಖರಾದ ಬಸವರಾಜ ಹಡಪದ, ಡಾ ಫಾರೂಕ್, ವಿದ್ಯಾಲಕ್ಷ್ಮಿ ಸಾಲಗತ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.