ADVERTISEMENT

ಹುಬ್ಬಳ್ಳಿ: ಅಮರ 5.0 ದೇಶಿ ಕೌಶಲ ಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 13:46 IST
Last Updated 24 ಆಗಸ್ಟ್ 2024, 13:46 IST
ಹುಬ್ಬಳ್ಳಿಯ ಕ್ಯುಬಿಕ್ಸ್‌ ಹೋಟೆಲ್‌ನಲ್ಲಿ ಇನ್ನರ್‌ವೀಲ್‌ ಕ್ಲಬ್‌ ಆಫ್‌ ಹುಬ್ಬಳ್ಳಿ ಮಿಡ್‌ಟೌನ್‌ ವತಿಯಿಂದ ಆಯೋಜಿಸಿದ್ದ  ’ಅಮರ 5.0 ದೇಶಿ ಕೌಶಲ ಪ್ರದರ್ಶನ‘ವನ್ನು  ಮಜೇಥಿಯಾ ಫೌಂಡೇಷನ್‌ ಅಧ್ಯಕ್ಷೆ ನಂದಿನಿ ಕಶ್ಯಪ್‌ ಮಜೇಥಿಯಾ ಉದ್ಘಾಟಿಸಿದರು
ಹುಬ್ಬಳ್ಳಿಯ ಕ್ಯುಬಿಕ್ಸ್‌ ಹೋಟೆಲ್‌ನಲ್ಲಿ ಇನ್ನರ್‌ವೀಲ್‌ ಕ್ಲಬ್‌ ಆಫ್‌ ಹುಬ್ಬಳ್ಳಿ ಮಿಡ್‌ಟೌನ್‌ ವತಿಯಿಂದ ಆಯೋಜಿಸಿದ್ದ  ’ಅಮರ 5.0 ದೇಶಿ ಕೌಶಲ ಪ್ರದರ್ಶನ‘ವನ್ನು  ಮಜೇಥಿಯಾ ಫೌಂಡೇಷನ್‌ ಅಧ್ಯಕ್ಷೆ ನಂದಿನಿ ಕಶ್ಯಪ್‌ ಮಜೇಥಿಯಾ ಉದ್ಘಾಟಿಸಿದರು   

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ಕ್ಯುಬಿಕ್ಸ್‌ ಹೋಟೆಲ್‌ನಲ್ಲಿ ಇನ್ನರ್‌ವೀಲ್‌ ಕ್ಲಬ್‌ ಆಫ್‌ ಹುಬ್ಬಳ್ಳಿ ಮಿಡ್‌ಟೌನ್‌ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ’ಅಮರ 5.0 ದೇಶಿ ಕೌಶಲ ಪ್ರದರ್ಶನ‘ಕ್ಕೆ ಶನಿವಾರ ಮಜೇಥಿಯಾ ಫೌಂಡೇಷನ್‌ ಅಧ್ಯಕ್ಷೆ ನಂದಿನಿ ಕಶ್ಯಪ್‌ ಮಜೇಥಿಯಾ ಚಾಲನೆ ನೀಡಿದರು.

ನಂತರ ಪ್ರದರ್ಶನದಲ್ಲಿದ್ದ ವಿಭಿನ್ನವಾದ ಬಟ್ಟೆ, ಆಭರಣ, ಬ್ಯಾಗ್‌, ಖಾದ್ಯಗಳ ಮಳಿಗೆಗಳನ್ನು ವೀಕ್ಷಿಸಿ, ಮಾತನಾಡಿದ ಅವರು, ’ಭಾರತವು ಭವ್ಯವಾದ ಪರಂಪರೆ ಹೊಂದಿದ್ದು, ವೈವಿಧ್ಯತೆಯಿಂದ ಕೂಡಿದೆ. ಇಲ್ಲಿ ಹಲವು ಧರ್ಮ, ಭಾಷೆಗಳಿದ್ದು ಅವು ತಮ್ಮದೇ ಆದ ವಿಶಿಷ್ಟತೆ ಹೊಂದಿವೆ. ಇವೆಲ್ಲವುಗಳಿಂದ ಭಾರತದ ಸಂಸ್ಕೃತಿಯೂ ಶ್ರೀಮಂತವಾಗಿದೆ‘ ಎಂದರು.

’ಅತಿಥಿಗಳನ್ನು ಸತ್ಕರಿಸುವುದು ನಮ್ಮ ಸಂಸ್ಕೃತಿ. ಈ ಪ್ರದರ್ಶನದಲ್ಲಿ ವಿವಿಧ ಜಿಲ್ಲೆ ಹಾಗೂ ವಿವಿಧ ರಾಜ್ಯದ ಮಹಿಳಾ ಉದ್ಯಮಿಗಳು ಪಾಲ್ಗೊಂಡಿದ್ದಾರೆ. ವಿಶೇಷ ವಿನ್ಯಾಸದ ಬಟ್ಟೆ, ಆಭರಣ ಹಾಗೂ ಖಾದ್ಯಗಳು ಇಲ್ಲಿವೆ‘ ಎಂದು ಹೇಳಿದರು.

ADVERTISEMENT

ಪತಂಜಲಿ ವೆಲ್‌ನೆಸ್‌ ಕೇಂದ್ರದ ಟ್ರಸ್ಟಿ ದಿನೇಶ್ ಜೈನ್ ಮಾತನಾಡಿ, ’ಮಹಿಳಾ ಉದ್ಯಮಿಗಳು ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಮಹಿಳೆ ತನ್ನ ಕುಟುಂಬ ನಿಭಾಯಿಸುವುದರೊಂದಿಗೆ ಉದ್ಯಮದಲ್ಲೂ ಯಶಸ್ವಿಯಾಗುವುದು ಸುಲಭವಲ್ಲ. ಮಹಿಳಾ ಉದ್ಯಮಿಗಳಿಗೆ ಇದು ಉತ್ತಮ ವೇದಿಕೆಯಾಗಿದೆ‘ ಎಂದು ಹೇಳಿದರು.

ಪತಂಜಲಿ ವೆಲ್‌ನೆಸ್‌ ಕೇಂದ್ರದ ಜನರಲ್‌ ಮ್ಯಾನೇಜರ್ ಮಧುಸೂದನ್‌ ದಾಸ, ಇನ್ನರ್‌ವೀಲ್‌ ಕ್ಲಬ್‌ ಮಿಡ್‌ಟೌನ್‌ನ ಅಧ್ಯಕ್ಷೆ ಶಿಲ್ಪಾ ಶೆಟ್ಟಿ, ಕಾರ್ಯದರ್ಶಿ ಶೈಲಜಾ ಬಗಾಡೆ, ಖಜಾಂಚಿ ಅರ್ಚನಾ ತಿವಾರಿ,  ಕ್ಲಬ್‌ನ ಮಾಜಿ ಅಧ್ಯಕ್ಷರಾದ ದೀಪಾಲಿ ಮುಧೋಳ, ಸಂಧ್ಯಾ ಮೋದಿ ಹಾಗೂ ಕಾರ್ಯಕ್ರಮದ ಅಧ್ಯಕ್ಷೆ ರಂಜನಾ ಖರಿತ, ಉಪಾಧ್ಯಕ್ಷೆ ಶಶಿಮಂಗಳಾ ಐತಾಳ ಸೇರಿದಂತೆ ಸಂಸ್ಥೆಯ ಸದಸ್ಯರು, ಮಹಿಳಾ ಉದ್ಯಮಿಗಳು ಇದ್ದರು.

ರಾಜ್ಯದ ವಿವಿಧ ಜಿಲ್ಲೆ ಹಾಗೂ ಮುಂಬೈ, ಹೈದರಾಬಾದ್, ಪುಣೆ, ಕೊಲ್ಲಾಪುರದ ಉದ್ಯಮಿಗಳು ಸೇರಿದಂತೆ 50ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿತ್ತು. ಬಟ್ಟೆ, ಆಭರಣ, ಖಾದ್ಯದ ಜೊತೆ ಪೇಂಟಿಂಗ್ಸ್‌, ಮನೆ ಆಲಂಕಾರಿಕ ವಸ್ತುಗಳು ಲಭ್ಯ ಇವೆ. ಭಾನುವಾರವೂ ಕೌಶಲ ಪ್ರದರ್ಶನ ನಡೆಯಲಿದೆ.

ಹುಬ್ಬಳ್ಳಿಯ ಕ್ಯುಬಿಕ್ಸ್‌ ಹೋಟೆಲ್‌ನಲ್ಲಿ ಇನ್ನರ್‌ವೀಲ್‌ ಕ್ಲಬ್‌ ಆಫ್‌ ಹುಬ್ಬಳ್ಳಿ ಮಿಡ್‌ಟೌನ್‌ ವತಿಯಿಂದ ಆಯೋಜಿಸಿದ್ದ  ’ಅಮರ 5.0 ದೇಶಿ ಕೌಶಲ ಪ್ರದರ್ಶನ‘ಕ್ಕೆ  ಮಜೇಥಿಯಾ ಫೌಂಡೇಷನ್‌ ಅಧ್ಯಕ್ಷೆ ನಂದಿನಿ ಕಶ್ಯಪ್‌ ಮಜೇಥಿಯಾ ಚಾಲನೆ ನೀಡಿದರು
ಹುಬ್ಬಳ್ಳಿಯ ಕ್ಯುಬಿಕ್ಸ್‌ ಹೋಟೆಲ್‌ನಲ್ಲಿ ನಡೆದ ’ಅಮರ 5.0 ದೇಶಿ ಕೌಶಲ ಪ್ರದರ್ಶನ‘ದ ಮಳಿಯೊಂದರಲ್ಲಿನ ವಸ್ತುಗಳನ್ನು ಮಜೇಥಿಯಾ ಫೌಂಡೇಷನ್‌ ಅಧ್ಯಕ್ಷೆ ನಂದಿನಿ ಕಶ್ಯಪ್‌ ಮಜೇಥಿಯಾ ವೀಕ್ಷಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.