ADVERTISEMENT

ಅನುಭವ ಮಂಟಪ ಯಾತ್ರೆಗೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 12:52 IST
Last Updated 27 ಏಪ್ರಿಲ್ 2025, 12:52 IST
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ‘ಅನುಭವ ಮಂಟಪ-ಬಸವಾದಿ ಶರಣರ ರಥ ಯಾತ್ರೆ’ಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಭಾನುವಾರ ಸ್ವಾಗತಿಸಿದರು
ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ‘ಅನುಭವ ಮಂಟಪ-ಬಸವಾದಿ ಶರಣರ ರಥ ಯಾತ್ರೆ’ಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಭಾನುವಾರ ಸ್ವಾಗತಿಸಿದರು   

ಧಾರವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರಂಭಿಸಿದ ‘ಅನುಭವ ಮಂಟಪ–ಬಸವಾದಿ ಶರಣರ ರಥ ಯಾತ್ರೆ’ಯನ್ನು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಭಾನುವಾರ ಸ್ವಾಗತಿಸಲಾಯಿತು. 

ಸಾಂಸ್ಕತಿಕ ಕಲಾ ತಂಡಗಳು ರಥಯಾತ್ರೆಗೆ ಮೆರಗು ನೀಡಿದವು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು  ಪುಷ್ಪಾರ್ಚನೆ ಮಾಡಿ, ಬಸವಣ್ಣನ ಪ್ರತಿಮೆಗೆ ನಮನ ಸಲ್ಲಿಸಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ತಹಶೀಲ್ದಾರ್  ಡಿ.ಎಚ್. ಹೂಗಾರ, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ ನರೆಗಲ್ಲ, ಮುಖಂಡರಾದ ಪ್ರಭಣ್ಣ ನಡಕಟ್ಟಿ, ನಾಗರಾಜ ಪಟ್ಟಣಶಟ್ಟಿ, ಶಾಂತವೀರ ಬಡಿಗೇರ, ಬಸವಂತಪ್ಪ ತೋಟದ, ಸವಿತಾ ಅಮರಶಟ್ಟಿ, ಸುರೇಶ ಹೊರಕೇರಿ, ಶಂಕರ ಹಲಗತ್ತಿ, ಜಿನದತ್ತ ಹಡಗಲಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.