ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ‘ಪ್ರಜಾವಾಣಿ’ಯ ಮೂವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸುಲೇಮಾನ್ ಅಬ್ದುಲ್ ಅಜೀಜಸಾಬ್ ಮುನವಳ್ಳಿ (ಪೊಲೀಸ್ ಇಲಾಖೆ) ಸ್ಮರಣಾರ್ಥ ನೀಡುವ ‘ಅತ್ಯುತ್ತಮ ಲೇಖನ’ ಪ್ರಶಸ್ತಿಗೆ ‘ಪ್ರಜಾವಾಣಿ’ಯ ಉಪಸಂಪಾದಕಿ ಸುಷ್ಮಾ ಸವಸುದ್ದಿ, ‘ಕೃಷಿ ಲೇಖನ’ ಪ್ರಶಸ್ತಿಗೆ ಉಪಸಂಪಾದಕಿ ಕಲಾವತಿ ಬೈಚಬಾಳ ಮತ್ತು ಸಾಹಿತಿ ದಿವಂಗತ ಎಂ.ಡಿ.ಗೋಗೇರಿ ಸ್ಮರಣಾರ್ಥ ನೀಡಲಾಗುವ ‘ಅತ್ಯುತ್ತಮ ಛಾಯಾಚಿತ್ರ’ ಪ್ರಶಸ್ತಿಗೆ ಹಿರಿಯ ಛಾಯಾಗ್ರಾಹಕ ಗೋವಿಂದರಾಜ ಜವಳಿ ಆಯ್ಕೆಯಾಗಿದ್ಧಾರೆ.
ಜುಲೈ 27ರಂದು ಜೆ.ಸಿ.ನಗರದ ಎಂಪ್ಲಾಯೀಸ್ ಸಭಾಂಗಣದಲ್ಲಿ ನಡೆಯುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿಗೆ ಆಯ್ಕೆಯಾದವರ ವಿವರ: ಮುರಿಗೆಮ್ಮ ಬಸಪ್ಪ ಹೂಗಾರ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿ: ಮರಿದೇವ ಹೂಗಾರ. ಶ್ರೀಮತಿ ಕಮಲವ್ವ ಸೋಮಶೇಖರಪ್ಪ ಬುರ್ಲಬಡ್ಡಿ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿ: ಅಜೀಜ್ ಅಹ್ಮದ ಬಳಗಾನೂರ.
ಜಿತೇಂದ್ರ ದಯಾಳಜಿ ಮಜೇಥಿಯಾ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ: ಪ್ರಕಾಶ ಲಮಾಣಿ.
ದಿ. ಕೃಷ್ಣಾಚಾರ್ಯ ರಾಘವಾಚಾರ್ಯ ಗಂಡಮಾಲಿ (ಮಾಮಾ) ಸ್ಮರಣಾರ್ಥ ಅತ್ಯುತ್ತಮ ಲೇಖನ ಪ್ರಶಸ್ತಿ: ವಿಜಯಕುಮಾರ ಬೆಳ್ಳೇರಿಮಠ. ಡಾ.ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನದ ಅತ್ಯುತ್ತಮ ಗ್ರಾಮೀಣ ಲೇಖನ ಪ್ರಶಸ್ತಿ: ಪ್ರಲ್ಹಾದಗೌಡ ಗೊಲ್ಲಗೌಡರ. ದಿವಂಗತ ರಾಮು ಆರ್.ಶೆಟ್ಟಿ ಸ್ಮರಣಾರ್ಥ ಇಂಗ್ಲಿಷ್ ಭಾಷೆ ವರದಿಗಾರಿಕೆ ಪ್ರಶಸ್ತಿ: ಸುಭಾಸಚಂದ್ರ ಎನ್.ಎಸ್.ಶ್ರೀಮತಿ ಲೀಲಾವತಿ ವಿಶ್ವನಾಥ ಶೆಟ್ಟಿ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ: ಹರ್ಷ ಕುಲಕರ್ಣಿ.
ಡಾ.ಬಿ.ಎಫ್.ದಂಡಿನ ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿ: ಸಾಯಿರಾಮ ಪವಾರ. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ ಅತ್ಯುತ್ತಮ ಪುಟ ವಿನ್ಯಾಸ ಪ್ರಶಸ್ತಿ: ಆನಂದ ಭಜಂತ್ರಿ.
ಲಕ್ಷ್ಮೀ ನಾರಾಯಣ ದತ್ತಿ ಉದಯೋನ್ಮುಖ ಪತ್ರಕರ್ತ ಪ್ರಶಸ್ತಿ: ಶಾನು ಯಲಿಗಾರ. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ತ್ರೀ ಸಬಲೀಕರಣ ವಿಶೇಷ ಪ್ರಶಸ್ತಿ: ನೀಲಮ್ಮ ಕೊಟ್ಟೂರಶೆಟ್ಟರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.